ಜಿಲ್ಲೆ

ಬರವಣಿಗೆಯಿಂದ ಸಾಹಿತ್ಯ, ಸಂಸ್ಕೃತಿ ಉಳಿವು : ಉಮ್ಮರ್ ಯು.ಎಚ್. ಅಭಿಪ್ರಾಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ನಮ್ಮೊಳಗಿನ ಸಾಹಿತ್ಯಕ್ಕೆ ಹೆಚ್ಚು ಬಲವಾಗಬೇಕಾದರೆ ಓದುವ ಹವ್ಯಾಸ ಹೆಚ್ಚಾಗಬೇಕು, ಬರವಣಿಗೆಯಿಂದ ಸಾಹಿತ್ಯ, ಸಂಸ್ಕೃತಿ ಉಳಿಸಲು ಸಾಧ್ಯ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮ್ಮರ್ ಯು.ಎಚ್. ಹೇಳಿದರು.

ಮದ್ ರ ಪ್ರಕಾಶನ ಮಲಾರ್-ಅರಸ್ತಾನ ವತಿಯಿಂದ ಪತ್ರಕರ್ತ, ಸಾಹಿತಿ ಹಂಝ ಮಲಾರ್ ಅವರ ‘ಫೇಸ್ ಬುಕ್’ ಕೃತಿ ಬುಧವಾರ ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಶೋಷಣೆ, ದಬ್ಬಾಳಿಕೆ, ಅಪಹಾಸ್ಯ, ಅಪನಂಬಿಕೆಗೆ ಬ್ಯಾರಿ ಸಮುದಾಯ ಒಳಗಾಗುತ್ತಿದೆ. ಮನುಷ್ಯ ಎಂದ ಮೇಲೆ ಕೊರತೆಗಳು ಸಾಮಾನ್ಯ. ಬ್ಯಾರಿ ಸಾಹಿತ್ಯ ಅಕಾಡೆಮಿ ಕೇವಲ ಒಬ್ಬನ ಸೊತ್ತಲ್ಲ, ಟೀಕೆ, ಟಿಪ್ಪಣಿಗಳು ಸಾಮಾನ್ಯವಾದರೂ ಅತಿಯಾಗಬಾರದು ಎಂದರು.

ದೇರಳಕಟ್ಟೆ ಮೇಲ್ತೆನೆ ಅಧ್ಯಕ್ಷ ಇಬ್ರಾಹಿಂ ತಪ್ಷಿಯಾ ನಡುಪದವು ಬಿಂದಾಸ್ ಹಾಗೂ ಬಿ.ಎ.ಮಹಮ್ಮದಲಿ ಕಮ್ಮರಡಿ ‘ಪಾಲುಂ-ಬಾಲೆ’ ಬ್ಯಾರಿ ಕೃತಿ ಬಿಡುಗಡೆಗೊಳಿಸಿದರು. ಮೇಲ್ತೆನೆ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಇಸ್ಮಾಯಿಲ್ ಮಾಸ್ಟರ್, ಸಾಹಿತಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಮೊದಲಾದವರು ಉಪಸ್ಥಿತರಿದ್ದರು.

ಲೇಖಕ ಹಂಝ ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಶೀರ್ ಕಲ್ಕಟ್ಟ ವಂದಿಸಿದರು. ಇಸ್ಮತ್ ಪಜೀರ್ ಕಾರ್ಯಕ್ರಮ ನಿರೂಪಿಸಿದರು.

ಬ್ಯಾರಿ, ಸಾಹಿತ್ಯ, ಭಾಷೆ, ಕಲೆ ಉಳಿಯಬೇಕಾದರೆ ಮಕ್ಕಳನ್ನು ಈಗಲೇ ಸಿದ್ಧಪಡಿಸಬೇಕಿದೆ. ಪಾಲುಂಬಾಲೆ ನಮ್ಮ ಬಾಲ್ಯದ ಜೀವನ ನೆನಪಿಸಿದರೆ ಪ್ರಸ್ತುತ ದಿನಗಳಲ್ಲಿ ಜನತೆ ಫೇಸ್ ಬುಕ್‌ನಲ್ಲಿ ಬಿಂದಾಸ್ ಆಗಿ ಜೀವನ ಸಾಗಿಸುತ್ತಿದ್ದಾರೆ. ಮೂರೂ ಕೃತಿಗಳ ಹೆಸರು ಅರ್ಥಗರ್ಭಿತ. ಇಬ್ರಾಹಿಂ ತಪ್ಷಿಯಾ ನಡುಪದವು ಅಧ್ಯಕ್ಷ, ಮೇಲ್ತೆನೆ