ಜಿಲ್ಲೆ

ಸರ್ಕಾರಿ ಶಾಲೆ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ : ಶೀಕರ ರೈ ಅಗರಿ ಕರೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ನೆಲ್ಯಾಡಿ

ಶಿಕ್ಷಣಕ್ಕೆ ಪ್ರೋತ್ಸಾಹ ಮತ್ತು ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಉತ್ತೇಜನ ನೀಡುವ ಸಲುವಾಗಿ ಇಂತಹ ಕಾರ್ಯಕ್ರಮಗಳು ಶ್ಲಾಘನಾರ್ಹ. ನಾವೆಲ್ಲ ಒಂದು ಎನ್ನುವ ಭಾವನೆಯಿಂದ ಜಾತಿ ಮತ್ತು ಧರ್ಮವನ್ನು ಮೀರಿ ಎಲ್ಲರನ್ನೂ ಸೇರಿಸಿ ಮಕ್ಕಳಿಗೆ ಪುಸ್ತಕ ವಿತರಿಸುತ್ತಿರುವುದು ಮಾದರಿ ಕಾರ್ಯ ಎಂದು ಕಡಬ ಸಾಮಾಜಿಕ ಮುಖಂಡ ಶ್ರೀಕರ ರೈ ಅಗರಿ ಹೇಳಿದರು.

ನೆಲ್ಯಾಡಿ ಗ್ರಾಮದ ರಾಮನಗರ ಅಮೆತ್ತಿಮಾರು ಗುತ್ತು ಮನೆಯಲ್ಲಿ ದಾನಿಗಳ ಸಹಕಾರದೊಂದಿಗೆ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಒಂದನೇ ತರಗತಿಯಿಂದ ಪದವಿವರೆಗಿನ 100 ಮಕ್ಕಳಿಗೆ ನೋಟ್‌ಬುಕ್ ಉಚಿತ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಧಾರ್ಮಿಕ ಮುಖಂಡ ರಮೇಶ ಗೌಡ ನಾಲ್ಗೊತ್ತು, ಉದ್ಯಮಿ ಉದಯ್ ಕುಮಾರ್ ಭಟ್, ನೆಲ್ಯಾಡಿ ಸಿಎ ಬ್ಯಾಂಕ್ ಸಿಬ್ಬಂದಿ ಮಹೇಶ್ ಗೌಡ ಮುದಲೆ ಗುತ್ತು, ಗಂಗಾಧರ ಶೆಟ್ಟಿ ಅಮೆತ್ತಿಮಾರು ಗುತ್ತು ಉಪಸ್ಥಿತರಿದ್ದರು. ನೆಲ್ಯಾಡಿ ಗ್ರಾಪಂ ಮಾಜಿ ಅಧ್ಯಕ್ಷ ಅಮೆತ್ತಿಮಾರು ಗುತ್ತು ಗಂಗಾಧರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.