ಜಿಲ್ಲೆ

ಕಾಣೆಯಾದ ಮಹಿಳೆ ಮೃತದೇಹ ಪತ್ತೆ

Avinash R

ಸುಳ್ಯ: ತಾಲೂಕಿನ ಮರ್ಕಂಜ ಮಿತ್ತಡ್ಕದ ಮೋಹನ ಎಂಬುವರ ಪತ್ನಿ ಶೋಭಾಲತಾ ಎಂಬುವರು ಕಾಣೆಯಾದ ಹಿನ್ನೆಲೆಯಲ್ಲಿ ಬಾವಿಗೆ ಹಾರಿರಬಹುದೆಂಬ ಅನುಮಾನದಿಂದ ಬಾವಿ ಅಗೆದು ನೋಡುವ ಕಾರ್ಯಾಚರಣೆ ಯಶಸ್ಸು ಕಂಡಿದ್ದು, ಶನಿವಾರ ಮೃತದೇಹ ಪತ್ತೆಯಾಗಿದೆ.

ಶೋಭಾಲತಾ ಸೆ.24ರ ಮಧ್ಯಾಹ್ನ ಮನೆಯಿಂದ ಕಾಣೆಯಾಗಿದ್ದರು. ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಅನುಮಾನದಿಂದ ಅವರ ಮನೆ ಬಳಿಯ ಬಾವಿಯಲ್ಲಿ ಹುಡುಕಲಾಗಿತ್ತು. ಸುಳ್ಯ ಪೊಲೀಸರ ಸಹಕಾರದಿಂದ ಸುಳ್ಯ ತಹಸೀಲ್ದಾರರ ಸೂಚನೆಯಂತೆ ಬಾವಿ ಅಗೆದು ಬಾವಿಯೊಳಗಿನ ಮಣ್ಣು ತೆಗೆಯುವ ಕಾರ್ಯಾಚರಣೆ ಶುಕ್ರವಾರ ಬೆಳಗ್ಗೆಯಿಂದ ಆರಂಭಿಸಲಾಗಿತ್ತು. ಮಣ್ಣು ತೆಗೆದ ಬಳಿಕ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದವರು ಬಾವಿಯೊಳಗೆ ಇಳಿದು ಹುಡುಕುವ ಕಾರ್ಯಾಚರಣೆ ಆರಂಭಿಸಿದಾಗ ಮೃತದೇಹ ಪತ್ತೆಯಾಗಿದೆ.