ಜಿಲ್ಲೆ

ಬೀಡಾಸ್ಟಾಲ್ ಬಳಿ ಪತ್ತೆಯಾಯಿತು ಡೆಡ್​ಬಾಡಿ!; ಮೂರು ದಿನಗಳ ಹಿಂದೆ ಮೃತಪಟ್ಟಿರುವ ಶಂಕೆ..

Webdesk - Ravikanth

ಬೆಂಗಳೂರು: ರಾಜಧಾನಿಯಲ್ಲಿ ಹಳೆಯ ಬೀಡಾಸ್ಟಾಲ್​ವೊಂದರ ಬಳಿ ಶವವೊಂದು ಪತ್ತೆಯಾಗಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತವಾರಣ ಉಂಟಾಗಿತ್ತು. ಬೆಂಗಳೂರಿನ ಜೆ.ಪಿ.ನಗರ 8ನೇ ಹಂತದಲ್ಲಿ ಚಲಾವಣೆಯಲ್ಲಿ ಇರದ ಬೀಡಾಸ್ಟಾಲ್​ವೊಂದರ ಬಳಿ ಈ ಶವ ಪತ್ತೆಯಾಗಿದೆ.

ಕಂಡು ಬಂದಿರುವ ಶವದ ಗುರುತು ಪತ್ತೆ ಹಚ್ಚಲಾಗಿದ್ದು, ಆತ ಸಂತೋಷ್​​ (35) ಎಂಬುದು ತಿಳಿದು ಬಂದಿದೆ. ಹತ್ತಿರದಲ್ಲಿ ವಾಸನೆ ಬರುತ್ತಿದ್ದರಿಂದ ಸ್ಥಳೀಯರು ಸುತ್ತಮುತ್ತ ಗಮನಹರಿಸಿದಾಗ ಶವ ಕಾಣಿಸಿತ್ತು. ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಜೆ.ಪಿ.ನಗರ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಸಂತೋಷ್​ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲೇ 3-4 ದಿನಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆಟೋ ಮೂಲಕ ಶವ ತೆರವು ಗೊಳಿಸಿದ್ದು, ತನಿಖೆ ಮುಂದುವರಿಸಿದ್ದಾರೆ. (ದಿಗ್ವಿಜಯ ನ್ಯೂಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ