ಜಿಲ್ಲೆ

ಆನೆಕಾಲು ರೋಗದ ರಕ್ತಪರೀಕ್ಷೆ

ಸೌಮ್ಯ ಆರ್

ಕಡಬ: ಕೊಯಿಲ ಆರೋಗ್ಯ ಕೇಂದ್ರದ ವತಿಯಿಂದ ಆಲಂಕಾರಿನಲ್ಲಿ ಆನೆಕಾಲು ರೋಗದ ಉಚಿತ ರಕ್ತಪರೀಕ್ಷೆ ಆಲಂಕಾರು ಗ್ರಾಮದ ಏಂತಡ್ಕದಲ್ಲಿ ನಡೆಯಿತು.

ಆರೋಗ್ಯ ಇಲಾಖೆಯ ಸರೋಜಿನಿ, ಸಿ.ಎಚ್.ಒ. ಬಿನ್ಸಿತೋಮಸ್, ಎಲ್.ಎಚ್.ವಿ.ಮರಿಯಮ್ಮ, ಲ್ಯಾಬ್ ಟೆಕ್ನಿಶಿಯನ್ ಯಶ್ ರಾಜ್, ರವಿಶಂಕರ್ ಎಚ್.ಐ.ಒ, ರಮ್ಯಾ ಸಿ.ಎಚ್.ಒ, ಆಶಾ ಕಾರ್ಯಕರ್ತೆಯರಾದ ತಾರಾ ಬಿ, ಪ್ರೇಮಾ ಎನ್, ಡೀಕಮ್ಮ, ಮೀನಾಕ್ಷಿ, ಆಲಂಕಾರು, ಗ್ರಾ.ಪಂ. ಅಧ್ಯಕ್ಷೆ ಸುಶೀಲ, ಉಪಾಧ್ಯಕ್ಷ ರವಿ ಪೂಜಾರಿ ಮೊದಲಾದವರು ಇದ್ದರು.

121 ಮಂದಿಯ ರಕ್ತ ಮಾದರಿ ಸಂಗ್ರಹಿಸಲಾಯಿತು. ನ.13ರಂದು ಆಲಂಕಾರು ಗ್ರಾ.ಪಂ. ಸಭಾಭವನದಲ್ಲಿ ರಾತ್ರಿ 8 ಗಂಟೆಯಿಂದ 12 ಗಂಟೆಯ ತನಕ ರಕ್ತ ಮಾದರಿ ಸಂಗ್ರಹಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.