ಜಿಲ್ಲೆ

ರಕ್ತದಾನಿಗಳು ಆರೋಗ್ಯ ಕಾಪಾಡಿಕೊಳ್ಳಿ

Kopala - Desk - Eraveni

ಕಂಪ್ಲಿ: ತಾಲೂಕಿನ ಉಪ್ಪಾರಹಳ್ಳಿಯ ಅಸ್ಮಾಯಮ್ಮ ಮತ್ತು ಆಂಜನೇಯ ಸ್ವಾಮಿ ಗಂಗೆಸ್ಥಳ ಉತ್ಸವ ನಿಮಿತ್ತ ದೇವಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮಂಗಳವಾರ ನಡೆಯಿತು.

ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಡಾ.ರೇವಸಿದ್ಧ ಕೋರಿ ಮಾತನಾಡಿ, ರಕ್ತದಾನ ಮಾಡುವಲ್ಲಿ ಯುವಜನತೆ ಜಾಗೃತರಾಗಬೇಕಿದೆ. ರೋಗಿಗಳಿಗೆ ನಾನಾ ಕಾರಣಗಳಿಂದ ರಕ್ತದ ಬೇಡಿಕೆ ಹೆಚ್ಚುತ್ತಿದ್ದು ದಾನಿಗಳು ಸ್ವಯಂಪ್ರೇರಿತರಾಗಿ ಮುಂದಾಗಬೇಕಿದೆ. ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಿ ಎಂದರು.

ಗ್ರಾ.ಪಂ.ಅಧ್ಯಕ್ಷ ಸಿ.ಡಿ.ಗುಂಡಮ್ಮ ಚೌಡಪ್ಪ, ಉಪಾಧ್ಯಕ್ಷ ಬಿ.ಗಿರೀಶ, ಸದಸ್ಯರಾದ ಎಚ್.ಕುಮಾರಸ್ವಾಮಿ, ಉಡೇದ ತಿಮ್ಮಪ್ಪ, ವಿರುಪಣ್ಣ, ಪ್ರಮುಖರಾದ ಹನುಮನಗೌಡ, ಸಿಎಚ್‌ಒ ಎ.ಈರಣ್ಣ, ಎಚ್‌ಐ ಒ.ಎರ‌್ರಿಸ್ವಾಮಿ,

ಆಶಾ ಕಾರ್ಯಕರ್ತೆಯರಾದ ವಿ.ಲಕ್ಷ್ಮೀ, ಹುಲಿಗೆಮ್ಮ, ಸೌಭಾಗ್ಯಮ್ಮ, ಸುಜಾತಾ, ಟಿ.ಸುಧಾ, ವಾಸಂತಿ, ನಿವೇದಿತಾ ಇದ್ದರು. ಶಿಬಿರದಲ್ಲಿ 51ಯುನಿಟ್ ರಕ್ತ ಸಂಗ್ರಹಿಸಿ ಬಳ್ಳಾರಿ ಸ್ವಾಮಿ ವಿವೇಕಾನಂದ ರಕ್ತ ಭಂಡಾರಕ್ಕೆ ರವಾನಿಸಲಾಯಿತು.