ರಕ್ತದಾನದಿಂದ ಪ್ರಾಣರಕ್ಷಣೆ ಸಾಧ್ಯ

11
Published on

ಟಪ್ರಭಾ: ಅಪಾಯದಲ್ಲಿರುವ ಅನೇಕ ಜನರ ಜೀವ ರಕ್ತದಾನದಿಂದ ಉಳಿಸಬಹುದು. ಹೀಗಾಗಿ ರಕ್ತದಾನ ಶ್ರೇಷ್ಠ ಎಂದು ಕಪರಟ್ಟಿ&ಕಳ್ಳಿಗುದ್ದಿ ಓಂಕಾರ ಆಶ್ರಮದ ಬಸವರಾಜ ಸ್ವಾಮೀಜಿ ಹೇಳಿದರು.

ಸಮೀಪದ ಕೊಣ್ಣೂರ&ಮರಡಿಮಠದ ಕಾಡಸಿದ್ಧೇಶ್ವರ ಮಠದ ಆವರಣದಲ್ಲಿ ಜೆಜಿ ಸಹಕಾರಿ ಆಸ್ಪತ್ರೆ ಟಪ್ರಭಾ ಹಾಗೂ ಸದ್ಭಕ್ತರ ಸಂಯುಕ್ತಾಶ್ರಯದಲ್ಲಿ ಲಿಂ.ಡಾ.ಅದೃಶ್ಯ ಗುರುಸಿದ್ಧೇಶ್ವರ ಸ್ವಾಮೀಜಿ 8ನೇ ಪುಣ್ಯಸ್ಮರಣೆ ನಿಮಿತ್ತ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಸ್ವಯಂಪ್ರೇರಿತ ಬೃಹತ್​ ರಕ್ತದಾನ ಶಿಬಿರದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.

ಕೊಣ್ಣೂರ&ಮರಡಿಮಠದ ಪೀಠಾಧಿಕಾರಿ ಡಾ.ಪವಾಡೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. 200ಕ್ಕಿಂತಲೂ ಹೆಚ್ಚಿನ ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ಅಂಕುರ್​ ಬ್ಲಡ್​ ಬ್ಯಾಂಕ್​ ಚಿಕ್ಕೋಡಿ ಹಾಗೂ ರೋಟರಿ ಕ್ಲಬ್​ ಗೋಕಾಕ ಅವರಿಗೆ ರಕ್ತ ಹಸ್ತಾಂತರಿಸಲಾಯಿತು. ಚಿಕಿತ್ಸೆ ಪಡೆದ ರೋಗಿಗಳಿಗೆ ಟಪ್ರಭಾದ ಜೆಜಿ ಸಹಕಾರಿ ಆಸ್ಪತ್ರೆಯಿಂದ ಔಷಧ ಉಚಿತವಾಗಿ ವಿತರಿಸಲಾಯಿತು. ಶ್ರೀಮಠದಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಟಪ್ರಭಾ ಜೆಜಿಕೋ ಆಸ್ಪತ್ರೆಯ ಸಿಇಒ ಡಾ.ಬಿ.ಕೆ.ಎಚ್​.ಪಾಟೀಲ ಅಧ್ಯತೆ ವಹಿಸಿದ್ದರು. ಗೋಕಾಕ ರೋಟರಿ ಕ್ಲಬ್​ ಚೇರ್ಮನ್​ ಮಲ್ಲಿಕಾರ್ಜುನ ಕಲ್ಲೋಳಿ, ಕಾಡಸಿದ್ಧೇಶ್ವರ ಶಿಣ ಸಮಿತಿಯ ಚೇರ್ಮನ್​ ಎ.ಜೆ. ಪಾಟೀಲ ಸೇರಿ ಗಣ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net