ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಬಿ.ಸಿ.ರೋಡಿಗೆ ಸಮೀಪದ ಗೂಡಿನ ಬಳಿಯಲ್ಲಿರುವ ಕ್ಲಬ್‌ನ ಕಟ್ಟಡದಲ್ಲಿ ಸುಮಾರು 85 ಲಕ್ಷ ರೂ. ವೆಚ್ಚದಲ್ಲಿ ಅನುಷ್ಠಾನಕ್ಕೆ ತಂದಿರುವ ರಕ್ತನಿಧಿ ಸೆಂಟರ್ ಶನಿವಾರ ಸಂಜೆ ಲೋಕಾರ್ಪಣೆಗೊಂಡಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಅತಿ ಅವಶ್ಯಕವಾದ ‘ಬ್ಲಡ್ ಬ್ಯಾಂಕ್’ ಸ್ಥಾಪಿಸುವ ಮೂಲಕ ಬಂಟ್ವಾಳ ರೋಟರಿ ಕ್ಲಬ್ ಉತ್ತಮ ಕಾರ್ಯ ಮಾಡಿದೆ. ತುರ್ತು ಸಂದರ್ಭದಲ್ಲಿ ಬಂಟ್ವಾಳ ಮಾತ್ರವಲ್ಲ ಬೆಳ್ತಂಗಡಿ ತಾಲೂಕಿನ ಜನತೆಗೆ ಅನುಕೂಲವಾಗಲಿದೆ ಎಂದರು.
ರೋಟರಿ ಜಿಲ್ಲಾ 3181ರ ಗವರ್ನರ್ ಎಚ್. ಆರ್.ಕೇಶವ ಉದ್ಘಾಟಿಸಿದರು. ಮೊಗರ್ನಾಡು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಆಡಳಿತ ಟ್ರಸ್ಟಿ ಜನಾರ್ದನ ವಾಸುದೇವ ಭಟ್ ಮೊಗರ್ನಾಡು ಆಶೀರ್ವಚನಗೈದರು.
ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ, ಮಂಗಳೂರು ಭಾರತ್ ಬೀಡಿ ಆಡಳಿತ ನಿರ್ದೇಶಕ ಸುಬ್ರಾಯ ಎಂ.ಪೈ., ಜಿಲ್ಲಾ ರೋಟರಿ ಮಾಜಿ ಗವರ್ನರ್‌ಗಳಾದ ಕೆ.ಕೃಷ್ಣ ಶೆಟ್ಟಿ, ಎನ್.ಪ್ರಕಾಶ್ ಕಾರಂತ, 25-26ರ ಸಾಲಿನ ನಿಯೋಜಿತ ಜಿಲ್ಲಾ ಗವರ್ನರ್ ಡಾ.ಸೂರ್ಯನಾರಾಯಣ, ಸಹಾಯಕ ಗವರ್ನರ್ ಲಾರೆನ್ಸ್ ಗೋನ್ಸಾಲಿಸ್, ವಲಯ ಲೆಫ್ಟಿನೆಂಟ್ ರವೀಂದ್ರ ದರ್ಬೆ, ವಿಶ್ವಾಸ್ ಶೆಣೈ, ಬ್ಲಡ್ ಸೆಂಟರ್ ಅಧ್ಯಕ್ಷ ಮಂಜುನಾಥ ಆಚಾರ್ಯ, ಕಾರ್ಯದರ್ಶಿ ಬಸ್ತಿ ಮಾಧವ ಶೆಣೈ, ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಐತಪ್ಪ ಆಳ್ವ, ನಿಕಟಪೂರ್ವ ಕಾರ್ಯದರ್ಶಿ ಭಾನುಶಂಕರ್ ಬನ್ನಿಂತ್ತಾಯ, ಕಾರ್ಯದರ್ಶಿ ಸದಾಶಿವ ಬಾಳಿಗ ಇದ್ದರು.
ಕ್ಲಬ್ ಅಧ್ಯಕ್ಷ ಪ್ರಕಾಶ್ ಬಾಳಿಗ ಸ್ವಾಗತಿಸಿ, ಕೆ.ನಾರಾಯಣ ಹೆಗ್ಡೆ ಪ್ರಸ್ತಾವನೆಗೈದರು. ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ಮುರಳೀಧರ ಪ್ರಭು ವಂದಿಸಿ, ಸದಸ್ಯ ಅಹಮ್ಮದ್ ಮುಸ್ತಾಫ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.