ಜಿಲ್ಲೆ

ಜನರಲ್ಲಿ ಆರೋಗ್ಯ ಕಾಳಜಿ ಅವಶ್ಯ : ಶಾಸಕ ಹರೀಶ್ ಪೂಂಜ ಆಶಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಜನರು ಉತ್ತಮ ಆರೋಗ್ಯವನ್ನು ಕಾಪಾಡಬೇಕು. ಎಲ್ಲ ರೀತಿಯ ಆಹಾರಗಳನ್ನು ರಾಸಾಯನಿಕ ರಹಿತವಾಗಿ ಉಪಯೋಗಿಸುವಂತಾಗಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ವೇಣೂರಿನ ಪಡ್ಡಂದಡ್ಕದಲ್ಲಿ ವೈದ್ಯಕೀಯ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಸಂಚಾಲಕ ರಮೇಶ ನಾಯಕ್ ಮೈರಾ, ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸತೀಶ ಕಾಶಿಪಟ್ಣ ಮಾತನಾಡಿದರು.

ಜಗದೀಶ್ ನಾಯಕ್ ವೇಣೂರು, ಮುರಳೀಧರ ಪ್ರಭು ವಗ್ಗ, ದಿನೇಶ್ ನೂಯಿ, ಅರುಣ್ ಡಿಸೋಜ, ಜೆಸ್ವಿನ್ ಲೋಬೊ, ಸೀತಾರಾಮ್ ರೈ, ಡಾ.ವಿಜಯಲಕ್ಷ್ಮೀ ನಾಯಕ್ ಮಂಗಳೂರು ಶಿಬಿರದ ನೇತೃತ್ವ ವಹಿಸಿದ್ದರು. ಮಂಗಳೂರು ಕೆಎಂಎಫ್ ನಿರ್ದೇಶಕ ಪ್ರಭಾಕರ ಉಲಿಮೇರು, ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ದ.ಕ. ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಅಧ್ಯಕ್ಷ ದಯಾನಂದ ನಾಯಕ್ ಪುಂಜಾಲಕಟ್ಟೆ, ಕಾರ್ಯದರ್ಶಿ ಸುಧಾಕರ ಪ್ರಭು ಪೆರ್ಮರೋಡಿ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಅಧ್ಯಕ್ಷ ಮುರಳೀಧರ ಪ್ರಭು ವಗ್ಗ, ನಿಕಟಪೂರ್ವ ಅಧ್ಯಕ್ಷ ವಿಜಯ ಶೆಣೈ ಕೊಡಂಗೆ, ಹಿರಿಯರಾದ ಡೆಚ್ಹಾರು ಗಣಪತಿ ಶೆಣೈ, ಕೆನರಾ ಬ್ಯಾಂಕಿನ ವಿಶ್ರಾಂತ ಸೀನಿಯರ್ ಮ್ಯಾನೇಜರ್ ಅನಂತ ಪ್ರಭು ಉಪಸ್ಥಿತರಿದ್ದರು. ಶಾಲಿನಿ ಕಾರ್ಯಕ್ರಮ ನಿರೂಪಿಸಿದರು. ಜಗದೀಶ ನಾಯಕ್ ವಂದಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್, ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಹಾಲು ಉತ್ಪಾದಕರ ಸಹಕಾರಿ ಸಂಘ ಪೆರಿಂಜೆ. ಕ್ರಿಸ್ತಾರಾಜ ದೇವಾಲಯ, ಭಾರತೀಯ ಕೆಥೊಲಿಕ್ ಯುವ ಸಂಚಾಲನ ವೇಣೂರು ಘಟಕ, ಬಂಟರ ಗ್ರಾಮ ಸಮಿತಿ ಹೊಸಂಗಡಿ, ಬಡಕೋಡಿ, ಜನಸೇವಾ ಟ್ರಸ್ಟ್ ಪಡ್ಡಂದಡ್ಕ, ಮಂಜುನಾಥೇಶ್ವರ ಭಜನಾ ಮಂಡಳಿ ಪಡ್ಡಂದಡ್ಕ, ಸಮುದಾಯ ಭವನ ಪಡ್ಡಂದಡ್ಕ, ದ.ಕ. ಜಿಲ್ಲಾ ಕುಡಾಳ್ ದೇಶಸ್ತ್ಯ ಆದ್ಯ ಗೌಡ್ ಬ್ರಾಹ್ಮಣ ಸಂಘ ಆಶ್ರಯದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಮಂಗಳೂರು, ಕೆಎಂಸಿ ಆಸ್ಪತ್ರೆ ಅತ್ತಾವರ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಆಶ್ರಯದಲ್ಲಿ ಶಿಬಿರ ನಡೆಯಿತು.