ಜಿಲ್ಲೆ

11ರಂದು ಪಾಣೆಮಂಗಳೂರಲ್ಲಿ ರಕ್ತದಾನ ಶಿಬಿರ

ಸೌಮ್ಯ ಆರ್

ಬಂಟ್ವಾಳ : ವಿಶ್ವ ಗಾಣಿಗರ ಚಾವಡಿ ಟ್ರಸ್ಟ್ ಮಂಗಳೂರು ದಶಮಾನೋತ್ಸವ ಅಂಗವಾಗಿ ಸಾಪಲ್ಯ ಸೇವಾ ಸಂಘ ಮುಂಬೈ ಅಧ್ಯಕ್ಷ ಶ್ರೀನಿವಾಸ ಸಪಲ್ಯ ಮುಂಬೈ ವತಿಯಿಂದ ಗೇನದ ತುಡರ್ ನಿಧಿ ಬಿಡುಗಡೆ ಸಮಾರಂಭ ಆಗಸ್ಟ್ 11ರಂದು ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸುಮಂಗಲಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಕ್ತ ನಿಧಿ ಸರ್ಕಾರಿ ಲೇಡಿಗೋಶನ್ ಜಿಲ್ಲಾಸ್ಪತ್ರೆ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಜತೆಗೆ ಚಿರಾವಿ ಓಪ್ಟಿಕಲ್ಸ್ ಪಾಣೆಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಕನ್ನಡಕ ವಿತರಣೆ ನಡೆಯಲಿದೆ ಎಂದು ವಿಶ್ವ ಗಾಣಿಗರ ಚಾವಡಿ ಟ್ರಸ್ಟ್ ಪ್ರಕಟಣೆ ತಿಳಿಸಿದೆ