ಜಿಲ್ಲೆ

ನಿಸ್ವಾರ್ಥ ಸೇವಾ ಭಾವದಿಂದ ಉನ್ನತಿ : ಜಯದೇವ ಖಂಡಿಗೆ ಅಭಿಪ್ರಾಯ

ಸೌಮ್ಯ ಆರ್

ಬದಿಯಡ್ಕ: ನಿಸ್ವಾರ್ಥ ಮನೋಭಾವದ ಸೇವಾ ಕಾರ್ಯ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಸಂಘಟನೆ ಮೂಲಕ ನಿರಂತರ ಸೇವಾ ಮನೋಭಾವ ಹೊಂದಿರುವ ಯುವಕರು ನಾಡಿಗೆ ಮಾದರಿ ಎಂದು ಧಾರ್ಮಿಕ- ಸಾಮಾಜಿಕ ಪ್ರಮುಖ ಜಯದೇವ ಖಂಡಿಗೆ ಹೇಳಿದರು.

ಸೇವಾಭಾರತಿ ಬದಿಯಡ್ಕ ಪಂಚಾಯಿತಿ ಘಟಕ ನೇತೃತ್ವದಲ್ಲಿ ಕಾಸರಗೋಡು ಸರ್ಕಾರಿ ಜನರಲ್ ಆಸ್ಪತ್ರೆ ಸಹಯೋಗದೊಂದಿಗೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನಲ್ಲಿ ಭಾನುವಾರ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾಸರಗೋಡು ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಸೌಮ್ಯಾ ಮಾತನಾಡಿದರು. ಸೇವಾ ಭಾರತಿ ಬದಿಯಡ್ಕ ಪಂಚಾಯಿತಿ ಘಟಕ ಅಧ್ಯಕ್ಷ ಸದಾಶಿವ ಬೇಳ, ಕೋಶಾಧಿಕಾರಿ ಗಣೇಶ್ ಬಿ.ಬದಿಯಡ್ಕ, ಆರೆಸ್ಸೆಸ್ ಖಂಡಚಾಲಕ್ ರಮೇಶ್ ಕಳೇರಿ, ಸೇವಾ ಭಾರತಿ ಕಾಸರಗೋಡು ಜಿಲ್ಲಾ ರಕ್ತನಿಧಿ ಪ್ರಮುಖ ದಯಾನಂದ ಭಟ್ ಕಾಸರಗೋಡು, ಸೇವಾ ಭಾರತಿ ಸ್ವಯಂಸೇವಕರು ಪಾಲ್ಗೊಂಡಿದ್ದರು.