ಜಿಲ್ಲೆ

ಕಾಂಗ್ರೆಸ್‌ನ ಅಸಲಿ ಬಂಡವಾಳ ಬಯಲು : ಜಗದೀಶ್ ಆಳ್ವ ಕೂವೆತ್ತಬೈಲ್ ಅಭಿಪ್ರಾಯ

ಸೌಮ್ಯ ಆರ್

ಉಳ್ಳಾಲ: ಕಾಂಗ್ರೆಸ್‌ನ ರಾಷ್ಟ್ರನಾಯಕ ರಾಹುಲ್ ಗಾಂಧಿ ಕೈಯಲ್ಲಿ ಸಂವಿಧಾನದ ಸಣ್ಣ ಪುಸ್ತಕವನ್ನಿಟ್ಟು ಲೋಕಸಭೆಯೊಳಗೆ ಸಂವಿಧಾನದ ರಕ್ಷಕ ಎಂದು ನಾಟಕಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್‌ನ ಅಸಲಿ ಬಂಡವಾಳವನ್ನು ಜನರು ಅರಿಯಬೇಕಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕೂವೆತ್ತಬೈಲ್ ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂವಿಧಾನ ಬದಲಾವಣೆ ಹೇಳಿಕೆ ನೀಡಿರುವುದರ ವಿರುದ್ಧ ಮಂಗಳೂರು ಬಿಜೆಪಿ ಮಂಡಲ ವತಿಯಿಂದ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಗುರುವಾರ ನಡೆದ ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಪಕ್ಷದ ಮಾಜಿ ಅಧ್ಯಕ್ಷರಾದ ಸೀತಾರಾಮ ಬಂಗೇರ, ಚಂದ್ರಶೇಖರ ಉಚ್ಚಿಲ, ಪದಾಧಿಕಾರಿಗಳಾದ ಹೇಮಂತ್ ಶೆಟ್ಟಿ, ಯಶವಂತ ದೇರಾಜೆ, ಪ್ರಕಾಶ್ ಸಿಂಪೋನಿ, ರಮೇಶ್ ಬೆದ್ರೊಳಿಕೆ, ಸುಮನಾ ಶೆಟ್ಟಿ, ಕೋಟೆಕಾರ್ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಿವ್ಯಾ ಶೆಟ್ಟಿ, ಸೋಮೇಶ್ವರ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ, ಕೊಣಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರಿಶ್ಚಂದ್ರ, ಪಕ್ಷದ ಪ್ರಮುಖರಾದ ಮಾಧವಿ ಉಳ್ಳಾಲ, ಮುರಳಿ ಕೊಣಾಜೆ, ವರಣ್ ತಲಪಾಡಿ, ಪದ್ಮನಾಭ ಗಟ್ಟಿ, ಸುಮಲತಾ, ಹರಿಣಾಕ್ಷಿ, ಶೇಖರ್ ಕನೀರ್ ತೋಟ, ಹರೀಶ್ ಅಂಬ್ಲಮೊಗರು, ಸ್ವಪ್ನಾ ಶೆಟ್ಟಿ, ಸತೀಶ್ ಪೂಜಾರಿ, ಬೃಜೇಶ್ ನಾಯರ್ ಮೊದಲಾದವರಿದ್ದರು.

ಮಂಡಲ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು. ಸೋಮೇಶ್ವರ ಪುರಸಭಾ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ ವಂದಿಸಿದರು.