ಜಿಲ್ಲೆ

ಸರ್ಕಾರಿ ಶಾಲಾ ಮಕ್ಕಳೊಂದಿಗೆ ಬಿಸಿಯೂಟ ಸವಿದ ಶಾಸಕ ಮತ್ತಿಮೂಡ್​!

ಕಲಬುರಗಿ: ಸರ್ಕಾರಿ ಶಾಲಾ ಮಕ್ಕಳೊಂದಿಗೆ ಬಿಸಿಯೂಟ ಸೇವಿಸುವ ಮೂಲಕ ಶಾಸಕ ಮತ್ತಿಮೂಡ್​​ ಅವರ ಬಗ್ಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಕಲಬುರಗಿ ಸಮೀಪದ ಕುಸನೂರ್ ಗ್ರಾಮದ ಸರಕಾರಿ ಶಾಲೆಗೆ ಭೇಟಿ ನೀಡಿದ ಶಾಸಕ, ಮಕ್ಕಳೊಂದಿಗೆ ಕುಳಿತ ಊಟ ಮಾಡಿದರು. ಬಿಜೆಪಿ ಗ್ರಾಮೀಣ ಮತಕ್ಷೇತ್ರದ ಶಾಸಕರಾಗಿರುವ ಬಸವರಾಜ್ ಮತ್ತಿಮೂಡ್ ಅವರು, ಸ್ವತಃ ತಾವೇ ಶಾಲಾ ಮಕ್ಕಳಿಗೆ ಊಟ ಬಡಿಸಿ, ಮಕ್ಕಳೊಂದಿಗೆ ಕೆಳಗಡೆ ಕುಳಿತು ಚಿಣ್ಣರೊಂದಿಗೆ ಬಿಸಿಯೂಟ ಸವಿದರು.

ಮಕ್ಕಳಿಗೆ ಒಳ್ಳೆಯ ಊಟ ಸಿಗ್ತಿದೆಯಾ ಇಲ್ವಾ ಎಂಬುದನ್ನು ಪರಿಶೀಲಿಸಿದ ಶಾಸಕರು, ನಂತರ ಮಕ್ಕಳೊಂದಿಗೆ ನೆಲದ ಮೇಲೆ ಕುಳಿತುಕೊಂಡರು. (ದಿಗ್ವಿಜಯ ನ್ಯೂಸ್​)