ಬೆಂಗಳೂರು: ಈ ಬಾರಿ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಬಯಸಿದ್ದು, ಬಹುಮತ ನೀಡಲಿದ್ದಾರೆ ಎಂದು ಮಹಾಲಕ್ಷ್ಮೀ ಲೇಔಟ್ ಬಿಜೆಪಿ ಅಭ್ಯರ್ಥಿ, ಅಬಕಾರಿ ಸಚಿವ ಕೆ. ಗೋಪಾಲಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದ ಮರಿಯಪ್ಪನಪಾಳ್ಯದ 44ನೇ ವಾರ್ಡ್ನಲ್ಲಿ ಮನೆ& ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದರು. 9 ವರ್ಷಗಳಿಂದ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಸಲಾಗಿದೆ. ನಮ್ಮ ಕ್ಲಿನಿಕ್ ಆರಂಭವಾಗಿದೆ. ಡಯಾಲಿಸಿಸ್ ಸೆಂಟರ್ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಎಂದರು.
ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ಸರ್ಕಾರವು ಜನಸಾಮಾನ್ಯರಿಗೆ ಆಕ್ಸಿಜನ್ ಹಾಗೂ ಉಚಿತ ಲಸಿಕೆ ಒದಗಿಸಲಾಗಿದೆ ಎಂದರು.
ಮರಿಯಪ್ಪನ ಪಾಳ್ಯದ 44ನೇ ವಾರ್ಡ್ನ ಕಿಲೋರ್ಸ್ಕರ್ ಫೌಂಡ್ರಿನಲ್ಲಿ 300ಕ್ಕಿಂತ ಹೆಚ್ಚು ಮನೆಗಳನ್ನು ಸ್ಲಂ ಬೋರ್ಡ್ ಮತ್ತು ಮಹಾನಗರ ಪಾಲಿಕೆಯಿಂದ ಕಟ್ಟಿಸಲಾಗಿದೆ. ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಸೆಯಂತೆ 140 ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಭರವಸೆ ಇದೆ ಎಂದು ಹೇಳಿದರು.
ಇದನ್ನೂ ಓದಿ: ಮಂಜುಳಾ ಲಿಂಬಾವಳಿ ಪರ ಕರಪತ್ರ ಹಂಚಿದ ಗ್ರಾಪಂ ಅಧ್ಯಕ್ಷ
ಮಹಾಲಕ್ಷ್ಮೀ ಲೇಔಟ್ನಲ್ಲಿ ಮೋದಿ ಆಸ್ಪತ್ರೆ ಹಾಗೂ ಬಸವೇಶ್ವರನಗರ ಮುಖ್ಯರಸ್ತೆಯಲ್ಲಿ ರೋಡ್ ಶೋನಲ್ಲಿ ಲಕ್ಷಕ್ಕಿಂತ ಹೆಚ್ಚಿನ ಜನ ಪ್ರಧಾನಿಯವರನ್ನು ಹತ್ತಿರದಿಂದ ನೋಡುವ ಅವಕಾಶ ಪಡೆದರು. ಈ ಮೂಲಕ ಮತದಾರರ ಮೇಲೆ ಪ್ರಭಾವ ಬೀರಿದ್ದಾರೆ ಎಂದರು.
ಬಿಜೆಪಿ ಅಧ್ಯರು ಕ್ಷೇತ್ರಕ್ಕೆ ಪ್ರಧಾನಿಯವರನ್ನು ಕ್ಷೇತ್ರಕ್ಕೆ ಕರೆಸುವುದಕ್ಕೆ ಕಾರಣಭೂತರಾದರು. ಅವರಿಗೆ ಹಾಗೂ ಕ್ಷೇತ್ರದಿಂದ ಬಂದ ಜನರಿಗೂ ಗೋಪಾಲಯ್ಯ ಧನ್ಯವಾದ ಸಲ್ಲಿಸಿದರು. ಬಿಬಿಎಂಪಿ ಮಾಜಿ ಸದಸ್ಯ ಮಹದೇವು, ಉಮಾಪತಿ, ಸಾಗರ್ ಸತೀಶ್, ಪಾನಿಪುರಿ ಕಿಟ್ಟಿ, ಪುಟ್ಟಣ್ಣ, ಮಂಜುಳಾ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.