ಮಂಜುಳಾ ಲಿಂಬಾವಳಿ ಪರ ಕರಪತ್ರ ಹಂಚಿದ ಗ್ರಾಪಂ ಅಧ್ಯಕ್ಷ

BJP
Published on

ಮಹದೇವಪುರ: ವಿಧಾನಸಭಾ ಕ್ಷೇತ್ರದ ಬಿದರಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಪರ ಬಿದರಹಳ್ಳಿ ಗ್ರಾಪಂ ಅಧ್ಯ ಬಿ.ಜಿ. ರಾಜೇಶ್​ ಮನೆ&ಮನೆಗೆ ತೆರಳಿ ಕರಪತ್ರ ಹಂಚುವ ಮೂಲಕ ಪ್ರಚಾರ ನಡೆಸಿದರು.

ನಂತರ ಮಾತನಾಡಿದ ರಾಜೇಶ್​, ಹಾಲಿ ಶಾಸಕ ಅರವಿಂದ ಲಿಂಬಾವಳಿ ಅವರು ಸರ್ವಜನಾಂಗದ ಅಭಿವೃದ್ಧಿ ಧ್ಯೇಯ ಹೊಂದಿರುವರು. ಅವರು ಕೈಗೊಂಡಿರುವ ಅಭಿವೃದ್ಧಿಗೆ ಹಾಗೂ ಡಬಲ್​ ಇಂಜಿನ್​ ಸರ್ಕಾರದ ಮಹತ್ತರ ಯೋಜನೆಗಳ ಸಹಕಾರಕ್ಕೆ ಬಿಜೆಪಿಗೆ ಮತ ನಿಡುವಂತೆ ಮನವಿ ಮಾಡಿದರು. 'ಬೂತ್​ ಗೆದ್ದರೆ ಕ್ಷೇತ್ರ ಗೆದ್ದಂತೆ' ಎಂಬುದು ನಮ್ಮ ಕಾರ್ಯಕರ್ತರ ಧ್ಯೇಯ. ಈ ನಿಟ್ಟಿನಲ್ಲಿ ಬೂತ್​ಗಳಲ್ಲಿ ಮುನ್ನಡೆ ಸಾಧಿಸಲಿದ್ದೇವೆ ಎಂದರು.

ನಮ್ಮ ಗ್ರಾಪಂ ವ್ಯಾಪ್ತಿಯಲ್ಲೂ ಸರ್ವತೋಮುಖ ಬೆಳವಣಿಗೆಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಲು ಶಾಸಕ ಅರವಿಂದ ಲಿಂಬಾವಳಿ ಅವರ ಧರ್ಮಪತ್ನಿ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿಗೆ ಹೆಚ್ಚಿನ ಮತಗಳನ್ನು ನೀಡಿ ಜಯಭೇರಿ ಸಾರಿಸೋಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net