ಜಿಲ್ಲೆ

ಡಿಸಿಎಂ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲೇ ಕುಸಿದುಬಿದ್ದು ಬಿಜೆಪಿ ಕಾರ್ಯಕರ್ತ ಸಾವು

ರಮೇಶ್​ ಕುಮಾರ್​​ ಬಿ ಎಡಮೋಳೆ

ರಾಮನಗರ: ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದ ವೇದಿಕೆಯಲ್ಲೇ ಕುಸಿದುಬಿದ್ದು ಬಿಜೆಪಿ ಕಾರ್ಯಕರ್ತನೊಬ್ಬ ಮೃತಪಟ್ಟಿರುವ ಘಟನೆ ಮಾಗಡಿಯಲ್ಲಿ ಗುರುವಾರ ನಡೆದಿದೆ.

ತಿಪ್ಪಸಂದ್ರ ಹೋಬಳಿಯ ಹೆಬ್ಬೆಳಲು ಗ್ರಾಮದ ನಿವಾಸಿ ಶಿವರಾಜು (55) ಮೃತ ವ್ಯಕ್ತಿ. ಹೃದಯಘಾತದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಬಿಜೆಪಿಗೆ ನೂತನ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ಮಾಗಡಿಯಲ್ಲಿ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಭಾಗಿಯಾಗಿದ್ದರು. ಕಾರ್ಯಕ್ರಮ ಪೂರ್ಣಗೊಳ್ಳುವ ಸಮಯದಲ್ಲಿ ವೇದಿಕೆ ಮೇಲಿಂದಲ್ಲೇ ಕುಸಿದು‌ಬಿದ್ದಿದ್ದರು. ಆಸ್ಪತ್ರೆಗೆ ಸಾಗಿಸುವ ಮೊದಲೇ ಶಿವರಾಜು‌ ಸಾವಿಗೀಡಾದ್ದಾರೆ.

ಡಿಸಿಎಂ ವೇದಿಕೆ ಇಳಿಯುತ್ತಿದ್ದಂತೆ ಶಿವರಾಜು ಕುಸಿದು ಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮೃತರು ತಿಪ್ಪಸಂದ್ರ ಹೋಬಳಿ ಮಂಡಲದ ಕಾರ್ಯದರ್ಶಿಯಾಗಿದ್ದರು. (ದಿಗ್ವಿಜಯ ನ್ಯೂಸ್​)