ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮ ಶತಾಬ್ದಿ ಉತ್ಸವದ ಅಂಗವಾಗಿ ದೇವಸ್ಥಾನದ ಶ್ರೀ ಮಹಾಗಣಪತಿ ಸನ್ನಿಧಾನದಲ್ಲಿ ವಿಶೇಷ ರಂಗಪೂಜೆ, ಪುಷ್ಪಾಲಂಕಾರ, ದೀಪಾರಾಧನೆ ಸೇವೆಗಳು ಜರುಗಿತು 
ಜಿಲ್ಲೆ

ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮಶತಾಬ್ದಿ

ಗಂಗೊಳ್ಳಿ: ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಶ್ರೀ ಸಂಸ್ಥಾನ ಕಾಶೀ ಮಠದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮ ಶತಾಬ್ದಿ ಅಂಗವಾಗಿ ದೇವಸ್ಥಾನದ ಶ್ರೀ ಮಹಾಗಣಪತಿ ಸನ್ನಿಧಾನದಲ್ಲಿ ವಿಶೇಷ ರಂಗಪೂಜೆ, ಪುಷ್ಪಾಲಂಕಾರ, ದೀಪಾರಾಧನೆ ಸೇವೆಗಳು ಭಾನುವಾರ ಜರುಗಿತು.

ಸಂಜೆ ವ್ಯಾಸೋಪಾಸನೆ, ಭಜನೆ, ಗುರು ಗುಣಗಾನ, ಶ್ರೀ ಮಹಾಗಣಪತಿ ಸನ್ನಿಧಾನದಲ್ಲಿ ವಿಶೇಷ ರಂಗಪೂಜೆ, ಪುಷ್ಪಾಲಂಕಾರ, ದೀಪಾರಾಧನೆ ಸೇವೆ, ಪ್ರಸನ್ನ ಪೂಜೆ ದೇವಳದ ಪ್ರಧಾನ ಅರ್ಚಕ ಜಿ.ಮೋಹನದಾಸ ಭಟ್, ಜಿ.ಪ್ರದೀಪ್ ಭಟ್ ನೇತೃತ್ವದಲ್ಲಿ ನಡೆಯಿತು. ಶ್ರೀ ವಿಠಲ ರಕುಮಾಯಿ ಸೇವಾ ಸಮಿತಿ ಸದಸ್ಯರು, ಅರ್ಚಕರು, ಸೇವಾದಾರರು, ಸಮಾಜಬಾಂಧವರು, ಭಜಕರು ಉಪಸ್ಥಿತರಿದ್ದರು.