ಜಿಲ್ಲೆ

ಗುರುಗಳ ತತ್ವ ಆದರ್ಶ ಪಾಲನೆ

ಇಂದಿರಾ ಎನ್ ಕೆ

ಪಡುಬಿದ್ರಿ: ಜಯ ಸಿ.ಸುವರ್ಣ ಮತ್ತು ಸೋಮಪ್ಪ ಸುವರ್ಣ ಹಾಗೂ ನಾರಾಯಣಗುರುಗಳ ತತ್ವ ಆದರ್ಶ ಪಾಲಿಸಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್ ಹೇಳಿದರು.

ಮುದರಂಗಡಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಭಾನುವಾರ ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅರ್ಧವಾರ್ಷಿಕ ಪ್ರಾದೇಶಿಕ ಮಹಾಸಭೆಯಲ್ಲಿ ಮಾತನಾಡಿದರು.

ಮುದರಂಗಡಿ ಬಿಲ್ಲವ ಸಂಘ ಮಾಜಿ ಅಧ್ಯಕ್ಷ ಕೃಷ್ಣ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ, ಬಿಲ್ಲವ ಸಂಘ ಉರ್ವ-ಅಶೋಕ ನಗರ, ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಕುಳಾಯಿ, ವೈಯಕ್ತಿಕವಾಗಿ ಪ್ರಶಸ್ತಿ ಪುರಸ್ಕೃತ ರಾಘು ಪೂಜಾರಿ ಉಡುಪಿ, ಸದಾಶಿವ ಡಿ ತುಂಬೆ, ವಿನೋದ್ ಮಂಚಿ, ಕೆ.ಜಗನ್ನಾಥ ಪೂಜಾರಿ, ಪ್ರದೀಪ್ ಕುಮಾರ್ ಬಸ್ರೂರು, ಮಹೇಶ್ ಪೂಜಾರಿ, ಸಚಿತ್ ಪೂಜಾರಿ ನಂದಳಿಕೆ, ಕೆ.ಸಂಜೀವ ಪೂಜಾರಿ, ಪದ್ಮನಾಭ ಕೋಟ್ಯಾನ್, ಮನೋಜ್ ಕನಪಾಡಿ, ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್, ಕೇಶವ ಕೆ.ಮಚ್ಚಿಮಲೆ, ಜಯಾನಂದ ಬೆಳ್ತಂಗಡಿ, ಸತೀಶ್ಚಂದ್ರ ಸಾಲ್ಯಾನ್ ಪಾಣಿಲ ಇರುವೈಲ್ ಮತ್ತು ವಿಶೇಷ ಸಾಧನೆಗೈದ ಧನ್ವಿ ಮರವಂತೆ, ಅಶ್ವಿನ್ ಸನಿಲ್, ಅಮಿತ್ ಮಟ್ಟು, ಎಚ್.ಎಂ.ಸತೀಶ್ ಕೊಪ್ಪ ಅವರನ್ನು ಅಭಿನಂದಿಸಲಾಯಿತು.

ಮಹಾಮಂಡಲ ಜತೆ ಕಾರ್ಯದರ್ಶಿ ಗಣೇಶ್ ಪೂಜಾರಿ, ಮುದರಂಗಡಿ ಬಿಲ್ಲವ ಸಂಘ ಗೌರವಾಧ್ಯಕ್ಷ ಗುಣಕರ ಪೂಜಾರಿ, ಅಧ್ಯಕ್ಷ ಕರುಣಾಕರ ಪೂಜಾರಿ, ಉಪಾಧ್ಯಕ್ಷ ಸುಧಾಕರ ಪೂಜಾರಿ, ಸೀತಾರಾಮ ಪೂಜಾರಿ, ರಾಮಣ್ಣ ಪಿಲಾರ್, ಲಕ್ಷ್ಮಣ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಆನಂದ ಪೂಜಾರಿ, ಜತೆ ಕಾರ್ಯದರ್ಶಿ ನವೀನ್ ಕುಮಾರ್, ಕೋಶಾಧಿಕಾರಿ ಉಮೇಶ್ ಪೂಜಾರಿ, ಕಟ್ಟಡ ಸಮಿತಿ ಅಧ್ಯಕ್ಷ ರೋಹನ್ ಕುಮಾರ್, ಮಹಿಳಾ ಘಟಕ ಗೌರವಾಧ್ಯಕ್ಷೆ ಸುಜಾತಾ ಬಿ.ಸುವರ್ಣ, ಅಧ್ಯಕ್ಷೆ ಪ್ರೇಮಾ ಆರ್.ಸಾಲ್ಯಾನ್, ಕಾರ್ಯದರ್ಶಿ ಸುಹಾಸಿನಿ ಎಚ್.ಕೋಟ್ಯಾನ್ ಉಪಸ್ಥಿತರಿದ್ದರು. ಗಣೇಶ್ ಎಲ್.ಪೂಜಾರಿ ಲೆಕ್ಕಪತ್ರ ಮಂಡಿಸಿದರು. ಜತೆ ಕಾರ್ಯದರ್ಶಿ ಶಿವಾಜಿ ಸುವರ್ಣ ವಂದಿಸಿದರು. ಸಂಜಯ್ ಪೂಜಾರಿ ನಿರೂಪಿಸಿದರು.

ಗೌರವಾರ್ಪಣೆ

ಸಮಾಜಸೇವೆ ಮಾಡುತ್ತಿರುವ ಗೀತಾಂಜಲಿ ಸುವರ್ಣ ಉಡುಪಿ, ವಿದ್ಯಾ ರಾಕೇಶ್, ಶಾಂತಾ, ನಮಿತಾ ಜೀವನ್, ನಾಗಮ್ಮ, ಶೋಭಾ ಹರಿಯಪ್ಪ, ಸಾವಿತ್ರಿ ಗಣೇಶ್, ಸುಲೋಚನಾ ಎಸ್.ಪಾಲನ್, ರಾಜಶ್ರೀ, ಉಷಾ ಅಂಚನ್, ಶೈಲಜಾ, ಪಾರ್ವತಿ ಅಮೀನ್, ಬಿಲ್ಲವ ಅಸೋಸಿಯೇಷನ್ ಮುಂಬೈ ಅಧ್ಯಕ್ಷರಾಗಿ ಆಯ್ಕೆಯಾದ ಹರೀಶ್ ಜಿ.ಅಮೀನ್, ಸಮಾಜಸೇವಕ ಕೃಷ್ಣಪ್ಪ ಪೂಜಾರಿ, ಗೆಜ್ಜೆಗಿರಿ ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ಅವರನ್ನು ಗೌರವಿಸಲಾಯಿತು.