ಜಿಲ್ಲೆ

ನಿಲುಗಡೆಗೊಳಿಸಿದ್ದ ಬೈಕ್ ಕಳವು

ಪಡುಬಿದ್ರಿ: ಪೆಟ್ರೋಲ್ ಖಾಲಿಯಾಗಿ ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳ ಬಳಿ ನಿಲ್ಲಿಸಿದ್ದ ಬೈಕೊಂದು ಕಳವಾಗಿದ್ದು, ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇರಳದ ಅಮಲ್ ಎಂಬುವರ ಬೈಕ್ ಕಳವಾಗಿದೆ. ಅಮಲ್ ಪತ್ನಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸಿಂಗ್ ಕಲಿಯುತ್ತಿದ್ದು, ಅವರನ್ನು ಭೇಟಿ ಮಾಡಲು ಅ.6ರಂದು ಬೈಕ್‌ನಲ್ಲಿ ಮಂಗಳೂರಿಗೆ ಬಂದಿದ್ದರು. ಬಳಿಕ ಬೈಕ್‌ನಲ್ಲಿ ಉಡುಪಿಯತ್ತ ಅಮಲ್ ಬಂದಿದ್ದು, ಪಾಂಗಾಳ ಹತ್ತಿರ ತಲುಪುವಾಗ ಪೆಟ್ರೋಲ್ ಖಾಲಿಯಾಗಿದೆ. ಬಳಿಕ ಬೈಕ್ ಅಲ್ಲಿಯೇ ನಿಲ್ಲಿಸಿದ್ದು, ಬೆಳಗ್ಗೆ 4 ಗಂಟೆಗೆ ಬೈಕಿದ್ದ ಸ್ಥಳಕ್ಕೆ ಬಂದಾಗ ಕಳವಾಗಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಅಮಲ್ ತಿಳಿಸಿದ್ದಾರೆ.