ಜಿಲ್ಲೆ

ಬೈಕ್‌ ಅಪಘಾತ ಇಬ್ಬರು ಯುವಕರು ಸಾವು

Uttara Kannada - Subash Hegde

ಯಲ್ಲಾಪುರ:ನಿಂತಿದ್ದ ಕಾರಿಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಒಬ್ಬ ಗಾಯಗೊಡ ಘಟನೆ ಪಟ್ಟಣದ ತಟಗಾರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಭಾನುವಾರ ಸಂಜೆ ನಡೆದಿದೆ.

    ರಾಮನಕೊಪ್ಪದ ದರ್ಶನ ಶ್ರೀಕಾಂತ ಭಂಡಾರಿ (17) ಹಾಗೂ ಹುಣಶೆಟ್ಟಿಕೊಪ್ಪದ ರಾಜೇಶ ಸುರೇಶ ಆಚಾರಿ (18) ಮೃತರು. ಮಂಜುನಾಥ ನಗರದ ಜಾಬೀರ್ ಮಹಮ್ಮದ್ ಗೌಸ್ ಗಾಯಗೊಂಡ ವ್ಯಕ್ತಿ.

ಈ ಮೂವರು ಬೈಕ್ ಮೇಲೆ ಅತಿವೇಗವಾಗಿ ಬರುತ್ತಿದ್ದು, ತಟಗಾರ ಕ್ರಾಸ್ ಬಳಿ ರಸ್ತೆಯ ಬಲವದಿಗೆ ನಿಲ್ಲಿಸಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಾಳು ಜಾಬೀರ್ ನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಸಾಗಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.