ಬೆಂಗಳೂರು: ನಗರದ ಮೂಡಲಪಾಳ್ಯದಲ್ಲಿ ಕಳೆದ ಭಾನುವಾರ ರಾತ್ರಿ ನಡೆದ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಬೆಚ್ಚಿಬೀಳಿಸುವಂತಿದೆ.
ಅತೀ ವೇಗವಾಗಿ ಬಂದ ಹೊಂಡ ಸಿವಿಕ್ ಕಾರು ಎದುರಿನ ರಾಯಲ್ ಎನ್ಫೀಲ್ಡ್ ಬೈಕ್ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಎರಡು ಪೀಸ್ ಆಗಿದೆ. ಗುದ್ದಿದ ರಭಸಕ್ಕೆ ಬೈಕ್ ಸವಾರ ಮೇಲಕ್ಕೆ ಹಾರಿಬಿದ್ದಿದ್ದಾನೆ.
ರಾಂಗ್ ಸೈಡ್ನಿಂದ ಬಂದು ಕಾರು ಗುದ್ದಿದ್ದು, ಬೈಕ್ ಸವಾರ ಅಕ್ಷಯ್ (28 ) ತೀವ್ರ ಗಾಯಗೊಂಡಿದ್ದಾರೆ. ಅಕ್ಷಯ್ ಸೊಂಟದಿಂದ ಮೇಲೆ ಸ್ವಾದೀನ ಕಳೆದುಕೊಂಡಿದ್ದು, ಸ್ಥಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.