ಜಿಲ್ಲೆ

ಮಲ್ಪೆಯಲ್ಲಿ ಗಾಳಕ್ಕೆ ಸಿಕ್ತು ಭರ್ಜರಿ ಮೀನು! ಮಾರುಕಟ್ಟೆಯಲ್ಲಿ ಈ ಮೀನಿಗಿದೆ ಭಾರೀ ಬೇಡಿಕೆ

ಉಡುಪಿ: ಮಲ್ಪೆ ಬೀಚಿನಲ್ಲಿ ಮೀನು ಹಿಡಿದ ಮೀನುಗಾರನಿಗೆ ಒಂದೇ ದಿನದಲ್ಲಿ ಎರಡು ಅಪರೂಪದ ಮೀನುಗಳು ಬಲೆಗೆ ಬಿದ್ದಿವೆ.

ಆಳೆತ್ತರದ ಮೀನನ್ನು ಗಾಳದ ಸಹಾಯದಿಂದ ಎಳೆದ ಬಳಿಕ ದೊಡ್ಡ ಮೀನು ಬಲೆಗೆ ಬಿದ್ದಿರುವುದನ್ನು ನೋಡಿ ಮೀನುಗಾರನಿಗೆ ಅಚ್ಚರಿಯುಂಟಾಗಿದೆ. 25 ಕೆಜಿ ತೂಕದ ಮುರು ಜಾತಿಯ ಮೀನು ಮತ್ತೊಂದು ಗಾಳಕ್ಕೆ 15 ಕೆಜಿ ತೂಕದ ಕೊಕ್ಕರ್ ಮೀನು ಬಲೆಗೆ ಬಿದ್ದಿದೆ.

ಬಿಡುವು ಸಿಕ್ಕಾಗಲೆಲ್ಲಾ ಮೀನು ಹಿಡಿಯುವುದು ನಾಗೇಶ್​ ಅವರ ಹವ್ಯಾಸಗಳಲ್ಲಿ ಒಂದು. ಆಗ್ಗಾಗ್ಗೆ ಮೀನು ಹಿಡಿಯುವುದು ಸಾಮಾನ್ಯ ಆದರೆ ಈ ಬಾರಿ ಭಾರೀ ಗಾತ್ರದ, ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಮೀನು ಸಿಕ್ಕಿದೆ ಎಂದು ಮೀನುಗಾರ ನಾಗೇಶ್​ ಸಂತಸ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)