ಕಾರವಾರ: ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಮುಖ್ಯಸ್ಥೆ ವಿಮಲಕ್ಕ (64)ಶುಕ್ರವಾರ ನಿಧನ ಹೊಂದಿದರು.
ಮೂಲತಃ ಭಟ್ಕಳದ ವಿಮಲಕ್ಕ ಬಿಎ ಪದವೀಧರರಾಗಿದ್ದರು. ಆದರೆ, ಆಧ್ಯಾತ್ಮದ ಕಡೆ ಒಲವು ಹೊಂದಿ ಸಂಸಾರ ಬಂಧಗಳನ್ನು ತೊರೆದು, ಸೇವೆಗೆ ಜೀವನ ಸಮರ್ಪಿಸಿದ್ದರು. ಈಶ್ವರೀ ಸಂಸ್ಥೆಯಲ್ಲಿ 1990 ರಿಂದ ಸೇವೆ ಪ್ರಾರಂಭಿಸಿದ ಅವರು, ಹುಬ್ಬಳ್ಳಿ, ಬಳ್ಳಾರಿ, ಗುಂಟಕಲ್, ಆದೋನಿ, ಯಲ್ಲಾಪುರ ಕೇಂದ್ರಗಳಲ್ಲಿದ್ದು, ನಂತರ ಕಾರವಾರಕ್ಕೆ ಬಂದಿದ್ದರು. ಕಳೆದ 20 ವರ್ಷಗಳಿಂದ ನಗರದಲ್ಲಿ ಪ್ರೀತಿ, ವಾತ್ಸಲ್ಯದ ವರ್ತನೆಯಿಂದ ಪ್ರಸಿದ್ಧರಾಗಿದ್ದರು. ಅವರ ಅವಧಿಯಲ್ಲೇ ನಗರದ ಕೆಎಚ್‌ಬಿಯಲ್ಲಿ ಈಶ್ವರೀಯ ಕೇಂದ್ರಕ್ಕೆ ನೂತನ ಸ್ವಂತ ಕಟ್ಟಡ ನಿರ್ಮಾಣವಾಗಿತ್ತು. ಶನಿವಾರ ರಾಜ್ಯದ ವಿವಿಧೆಡೆಯಿಂದ 50 ಕ್ಕೂ ಅಧಿಕ ಪ್ರಬ್ಹಕುಮಾರ,ಕುಮಾರಿಯರು ಆಗಮಿಸಿ ರಾಜಯೋಗಧ್ಯಾನದ ಮೂಲಕ ವಿಮಲಕ್ಕನ ಆತ್ಮಕ್ಕೆ ಶಾಂತಿ ಕೋರಿದರು. ನಂತರ ಮೆರವಣಿಗೆಯಲ್ಲಿ ಕೊಂಡೊಯ್ದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಇದನ್ನೂ ಓದಿ: ಸಿದ್ದಿ ಹೋಂಸ್ಟೇಗೆ ವಿವಾದದ ಕಿಡು