More

    ಸಿದ್ದಿ ಹೋಂಸ್ಟೇಗೆ ವಿವಾದದ ಕಿಡಿ

    ಕಾರವಾರ: ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಪಂ ವ್ಯಾಪ್ತಿಯ ಲಿಂಗದಬೈಲ್‌ನಲ್ಲಿ ಜಿಪಂನಿಂದ ಪ್ರಾರಂಭಿಸಲಾಗುತ್ತಿರುವ ಡಮಾಮಿ ಸಿದ್ದಿ ಪ್ರವಾಸೋದ್ಯಮ ಕ್ಷೇತ್ರವು ಸ್ವ ಸಹಾಯ ಸಂಘದ ಸದಸ್ಯರ ನಡುವಿನ ಭಿನ್ನಾಭಿಪ್ರಾಯದಿಂದ ವಿವಾದದ ಕೇಂದ್ರವಾಗಿ ಮಾರ್ಪಟ್ಟಿದೆ.
    ಪ್ರವಾಸೋದ್ಯಮ ಕ್ಷೇತ್ರದ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಮಹಿಳಾ ಸ್ವ ಸಹಾಯ ಸಂಘದ ಮಾಜಿ ಅಧ್ಯಕ್ಷೆ ಹಾಗೂ ಸಂಘದ ಹಾಲಿ ಅಧ್ಯಕ್ಷ, ಸದಸ್ಯರ ನಡುವೆ ಪರಸ್ಪರ ಆರೋಪ, ಪ್ರತ್ಯಾರೋಪಗಳು, ಗಲಾಟೆಗಳು ನಡೆಯುತ್ತಿದ್ದು, ಕೇಂದ್ರದ ಉದ್ಘಾಟನೆಗೆ ಹಿನ್ನಡೆಯಾಗಿದೆ.
    ಹಲ್ಲೆ ದೂರು ದಾಖಲು:
    ಸಂಘದ ಮಾಜಿ ಅಧ್ಯಕ್ಷೆ ರಾಜೇಶ್ವರಿ ಸಿದ್ದಿ ಅವರ ಮೇಲೆ ಕೆಲವರು ಯಲ್ಲಾಪುರದಲ್ಲಿ ಹಲ್ಲೆ ನಡೆಸಿದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿರುವ ರಾಜೇಶ್ವರಿ, ಕಾರವಾರ ಕ್ರಿಮ್ಸ್ಗೆ 3 ದಿನಗಳ ಹಿಂದೆ ಬಂದು ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು. ಎಸ್‌ಪಿ ಅವರಿಗೂ ದೂರು ನೀಡಿದ್ದರು. ಎಸ್‌ಪಿ ಸೂಚನೆಯ ಬಳಿಕ ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ರಾಜೇಶ್ವರಿ ಅವರ ಮೇಲೆ ಹಲ್ಲೆ ಮಾಡಿದ್ದಾರೆನ್ನಲಾದ 16 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
    `ಸಿದ್ದಿ ಹೋಂ ಸ್ಟೇ ನಿರ್ಮಾಣದಲ್ಲಿ ಅವ್ಯವಹಾರವಾಗಿದೆ. ಸಿದ್ಧಿ ಸಮುದಾಯವನ್ನು ಗಣನೆಗೆ ತೆಗೆದುಕೊಳ್ಳದೇ ಅದರ ಹೆಸರನ್ನು ಡಮಾಮಿ ಪ್ರವಾಸೋದ್ಯಮ ಕ್ಷೇತ್ರ ಎಂದು ಬದಲಿಸಲಾಗಿದೆ’ ಎಂಬುದು ರಾಜೇಶ್ವರಿ ಅವರ ಆರೋಪವಾಗಿತ್ತು. ನಾನು ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ನನ್ನ ಮೇಲೆ ಹಲ್ಲೆ ನಡೆಸಿ, ಮಾನಭಂಗ ಮಾಡಲಾಗಿದೆ ಎಂದು ಅವರು ದೂರಿದ್ದಾರೆ. ರಾಜೇಶ್ವರಿ ಹಾಗೂ ಇತರರ ಆಕ್ಷೇಪಣೆಯ ಹಿನ್ನೆಲೆಯಲ್ಲಿ ಫೆ. 3 ರಂದು ನಡೆಯಬೇಕಾಗಿದ್ದ ಕೇಂದ್ರದ ಉದ್ಘಾಟನೆ ಮುಂದೂಡಲಾಗಿತ್ತು. ವಿವಾದದ ಬಳಿಕ ಪಂಚಾಯತ್‌ರಾಜ್ ಇಲಾಖೆಯ ಆಯುಕ್ತೆ ಪ್ರಿಯಾಂಕಾ ಮೇರಿ ಸ್ಥಳ ಪರಿಶೀಲನೆ ನಡೆಸಿದ್ದರು.
    ಸರ್ವಾಧಿಕಾರಿ ಧೋರಣೆ:
    ರಾಜೇಶ್ವರಿ ಸಿದ್ದಿ ಅವರು ಸರ್ವಾಧಿಕಾರಿ ದೋರಣೆ ತೋರುತ್ತಿದ್ದರಿಂದ ಸರ್ವ ಸಾಧಾರಣ ಸಭೆಯಲ್ಲಿಯೇ ಠರಾವು ಮಾಡಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ. 2023 ರಲ್ಲಿಯೇ ಈ ಪ್ರಕ್ರಿಯೆ ಕಾನೂನಾತ್ಮಕವಾಗಿಯೇ ನಡೆದಿದೆ. ಆದರೆ, ಅವರು ಸಂಘದ ಇತರ ಸದಸ್ಯರ ಮೇಲೆ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಮಹಿಳಾ ಸ್ವ ಸಹಾಯ ಸಂಘದ ಸದಸ್ಯೆಯರು ಹೇಳಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ವತ್ಸಲಾ ಸಿದ್ದಿ, ವೀಣಾ ಸಿದ್ದಿ, ಸವಿತಾ ಸಿದ್ದಿ, ನಾಗವೇಣಿ ಸಿದ್ದಿ, ಲಲಿತಾ ಸಿದ್ದಿ , ಮಂಜುನಾಥ ಇತರರು ರಾಜೇಶ್ವರಿ ಸಿದ್ದಿ ಅವರ ಮೇಲೆ ಸಂಘದ ಸದಸ್ರ‍್ಯಾರೂ ಹಲ್ಲೆ ಮಾಡಿಲ್ಲ. ಸಭೆಯೊಂದಕ್ಕೆ ಹೋಗಿ ವಾಪಸ್ ಬರುವಾಗ ಎದುರಾದ ರಾಜೇಶ್ವರಿ ಸಿದ್ದಿ ಅವರು ನಿಂದನೆ ಪ್ರಾರಂಭಿಸಿದರು. ಗಲಾಟೆ ಕೈ,ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ನಾವು ತಪ್ಪಿಸಿದ್ದೇವೆ ಎಂದಿದ್ದಾರೆ.

    ಏನಿದು ಡಮಾಮಿ ಪ್ರವಾಸೋದ್ಯಮ ಕ್ಷೇತ್ರ..?
    ಎನ್‌ಆರ್‌ಎಲ್‌ಎಂ ಹಾಗೂ ಎನ್‌ಆರ್‌ಇಜಿಎ ಯೋಜನೆಯಡಿ ಉತ್ತರ ಕನ್ನಡ ಜಿಪಂನಿಂದ ಡಮಾಮಿ ಸಿದ್ಧಿ ಪ್ರವಾಸೋದ್ಯಮ ಕ್ಷೇತ್ರ ಕಟ್ಟಡ ನಿರ್ಮಾಣ ಮಾಡಲಾಗಿದೆ. ಅದರ ನಿರ್ವಹಣೆಯನ್ನು ಯಲ್ಲಾಪುರದ ಇಡಗದಿಯ ಸಿದ್ದಿ ಮಹಿಳಾ ಸ್ವ ಸಹಾಯ ಸಂಘವೊAದಕ್ಕೆ ನೀಡಲಾಗಿತ್ತು. ಹೋಂ ಸ್ಟೇ ಮಾದರಿಯಲ್ಲಿ ಅದನ್ನು ನಡೆಸಿ, ಸಿದ್ದಿ ಬುಡಕಟ್ಟಿನ ಕಲೆ, ಸಂಸ್ಕೃತಿ, ಆಹಾರ ಪದ್ಧತಿಯನ್ನು ಪ್ರಚುರಪಡಿಸುವುದು, ಜತೆಗೆ ಆ ಸಮುದಾಯದ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಯೋಜನೆ ಇದಾಗಿತ್ತು.

    ಇದನ್ನೂ ಓದಿ: ಡಮಾಮಿ ಸಿದ್ದಿ ಸಮುದಾಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪಂಚಾಯತ್ ರಾಜ್ ಆಯುಕ್ತೆ ಪ್ರಿಯಾಂಕಾ ಮೇರಿ ಪ್ರಾನ್ಸಿಸ್ ಭೇಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts