ಜಿಲ್ಲೆ

12ರಿಂದ ಗೀತಾಮಂದಿರದಲ್ಲಿ ಭಾರತ ಮೇಳ

ಉಡುಪಿ: ಪರ್ಯಾಯ ಪುತ್ತಿಗೆ ಮಠ, ಜಿಲ್ಲಾ ಪಂಚಾಯಿತಿ, ತುಳುಕೂಟ, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ, ಲಯನ್ಸ್ ಕ್ಲಬ್, ಸಾಸ್ ಮಹಿಳಾ ಘಟಕ ಸಹಯೋಗದಲ್ಲಿ ಏ.12ರಿಂದ 22ರವರೆಗೆ ಗೀತಾ ಮಂದಿರದಲ್ಲಿ ಭಾರತೀಯ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಶಿಷ್ಟೃಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ‘ಭಾರತ ಮೇಳ’ ಆಯೋಜಿಸಲಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.

ಮೇಳದಲ್ಲಿ ಹಳೇ ಪುಸ್ತಕಗಳು, ಪುರಾತನ ಜೀವನಪದ್ಧತಿ ಮಾಹಿತಿಗಳು, ತಾಳೆಗರಿ ಗ್ರಂಥಗಳ ಸಹಿತ ಪಾರಂಪರಿಕ ವಸ್ತುಗಳ ಪ್ರದರ್ಶನ, ಕೃತಕ ಆಭರಣ, ಖಾದಿ ಮತ್ತು ಕೈಮಗ್ಗ ವಸಗಳ ಭಂಡಾರ, ಕರಕುಶಲವಸ್ತುಗಳು, ಗವ್ಯೋತ್ಪನ್ನಗಳು, ಜ್ಯೋತಿಷ, ಖಗೋಳ ಮಾಹಿತಿ, ಮಣ್ಣಿನ ಮಡಕೆಗಳು, ವಿಗ್ರಹ, ಗಂಜೀಾ ಚಿತ್ರಕಲಾ ವೈಭವ ಮಳಿಗೆಗಳು ಪ್ರದರ್ಶನದಲ್ಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

12ರಂದು ಸಂಜೆ 4ಕ್ಕೆ ಭಂಡಾರಕೇರಿ ಮಠಾಧೀಶ ವಿದ್ಯೇಶತೀರ್ಥ ಸ್ವಾಮೀಜಿ ಮೇಳ ಉದ್ಘಾಟಿಸಲಿದ್ದಾರೆ. ಸಂಸ್ಕೃತ ವಿವಿ ಉಪಕುಲಪತಿ ಡಾ.ಅಹಲ್ಯಾ ಮುಖ್ಯ ಅತಿಥಿಗಳಾಗಿರುವರು. ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀರಮಣ ಆಚಾರ್ಯ, ತುಳುಕೂಟ ಜಿಲ್ಲಾ ಮಹಿಳಾ ಘಟಕ ಗೌರವಾಧ್ಯಕ್ಷೆ ಉಮಾ ಸುವರ್ಣ, ಅಧ್ಯಕ್ಷೆ ತಾರಾ ಉಮೇಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ತಾರಾ ಸತೀಶ್, ಕೋಶಾಧಿಕಾರಿ ಜ್ಯೋತಿ ಸತೀಶ್ ದೇವಾಡಿಗ, ನಗರಸಭೆ ಅಧ್ಯಕ್ಷೆ ಸುಕನ್ಯಾ ಶೇಖರ್, ಲಯನ್ಸ್ ಕ್ಲಬ್ ಅಧ್ಯಕ್ಷ ಲಕ್ಷ್ಮೀಕಾಂತ್ ಬೆಸ್ಕೂರ್, ಕೋಶಾಧಿಕಾರಿ ದಿವಾಕರ್ ಶೆಟ್ಟಿ ಬುಡ್ನಾರು, ತುಳುಕೂಟ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ರತ್ನಾಕರ್ ಇಂದ್ರಾಳಿ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ಕೃಷ್ಣಮಠದಲ್ಲಿ ಹನುಮ ಜಯಂತಿ

ಶ್ರೀ ಕೃಷ್ಣಮಠದಲ್ಲಿ ಏ.12ರಂದು ಹನುಮ ಜಯಂತಿ ನಡೆಯಲಿದೆ. ಸಂಜೆ 5ಕ್ಕೆ ರಾಜಾಂಗಣದಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ವಿಶ್ವಮಟ್ಟದ ಭಗವದ್ಗೀತಾ ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.