ಕೋಟ: ಇಲ್ಲಿನ ಕೋಟದ ಶ್ರೀ ಕಾಶೀಮಠ ಶ್ರೀ ಮುರುಳೀಧರಕೃಷ್ಣ ಮಾರುತಿ ದೇಗುಲದಲ್ಲಿ ಅಷ್ಟಮಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಡುವೆ ಭಜನಾ ಸಪ್ತಾಹ ಭಾನುವಾರ ಸಂಪನ್ನಗೊಂಡಿತು.
ಕೋಟದ ಜಿಎಸ್‌ಬಿ ಸಮಾಜದವರು ದೇಗುಲದಲ್ಲಿ ಧಾರ್ಮಿಕ ವಿಧಿ-ವಿಧಾನ ಪೂರೈಸಿದರು. ಕೋಟದ ರಾಷ್ಟ್ರೀಯ ಹೆದ್ದಾರಿ ಮೂಲಕ ಬಣ್ಣ ಬಣ್ಣದ ರಂಗಿನ ಓಕುಳಿಯಾಟ ಗಮನ ಸೆಳೆಯಿತು.
ಕೋಟದ ಕಾಶೀಮಠ ದೇವದತ್ತ ಭಟ್, ಕಪಿಲದಾಸ್ ಭಟ್, ಸಮುದಾಯದ ಪ್ರಮುಖರಾದ ರಮೇಶ್ ಪಡಿಯಾರ್, ನರಸಿಂಹ ಪ್ರಭು, ಸತೀಶ್ ಹೆಗ್ಡೆ ಸೇರಿದಂತೆ ಸಮುದಾಯದವರು ಉಪಸ್ಥಿತರಿದ್ದರು.