ಜಿಲ್ಲೆ

ರಾಮಚಂದ್ರ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ

ಇಂದಿರಾ ಎನ್ ಕೆ

ಕುಂದಾಪುರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದರ ಚಾತುರ್ಮಾಸ್ಯ ಸಂದರ್ಭದಲ್ಲಿ, ಶ್ರೀ ಕಾಶೀ ಮಠದ ಪರಮಪೂಜ್ಯ ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವ ಆಚರಣೆ ಅಂಗವಾಗಿ ‘ಶತ ನಮನ ಶತ ಸ್ಮರಣ ಶತ ದಿವಸ ಅಖಂಡ ಭಜನೆ’ ಹಮ್ಮಿಕೊಳ್ಳಲಾಯಿತು.

100 ದಿನಗಳ ಆಹೋರಾತ್ರಿ ಭಜನೆ ಸಂದರ್ಭದಲ್ಲಿ ಬೆಂಗಳೂರಿನ ಕಲಾವಿದರಾದ ಚಂದನಾ ಮುರಳೀಧರ, ಸುಪ್ರೀತಾ ಪ್ರದೀಪ ವಿಶೇಷ ಭಜನಾ ಕಾರ್ಯಕ್ರಮವನ್ನು ಶನಿವಾರ ಪ್ರಸ್ತುತ ಪಡಿಸಿದರು. ಹಾರ್ಮೋನಿಯಂನಲ್ಲಿ ಪ್ರಸಾದ ಕಾಮತ್, ತಬಲಾದಲ್ಲಿ ಅಶ್ವಥ್ ಶೆಣ್ಣೆ, ವಿಘ್ನೇಶ ಪ್ರಭು, ತಾಳದಲ್ಲಿ ಶ್ರೀಶ ಶೆಣೈ ಸಹಕರಿಸಿದರು.