ಕುಂದಾಪುರ ನವದೇವಿ ದೇವಳದಲ್ಲಿ ಭಜನಾ ಕಾರ್ಯಕ್ರಮ ಜರುಗಿತು 
ಜಿಲ್ಲೆ

ನವದೇವಿ ದೇವಳದಲ್ಲಿ ಭಜನಾ ಕಾರ್ಯಕ್ರಮ

ಇಂದಿರಾ ಎನ್ ಕೆ

ಗಂಗೊಳ್ಳಿ: ತಾಲೂಕು ಭಜನಾ ಮಂಡಳಿಗಳ ಒಕ್ಕೂಟ ಕುಂದಾಪುರ, ವಲಯ ಭಜನಾ ಮಂಡಳಿಗಳ ಒಕ್ಕೂಟ ಕುಂದಾಪುರ ಮತ್ತು ಶ್ರೀ ಚಿಕ್ಕಮ್ಮ ದೇವಿ ಭಜನಾ ಮಂಡಳಿ ಒಂಭತ್ತು ದಂಡಿಗೆ ಕುಂದಾಪುರ ಸದಸ್ಯರಿಂದ ಒಂದೇ ದಿನ ನವದೇವಿ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ಶುಕ್ರವಾರ ಜರುಗಿತು.
ಬೆಳಗ್ಗೆ ಕುಂದಾಪುರದ ಶ್ರೀ ಚಿಕ್ಕಮ್ಮ ದೇವಿ ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನ ಪ್ರಧಾನ ಅರ್ಚಕ ವಿಶ್ವನಾಥ್ ಭಟ್, ಜಿಲ್ಲಾ ಭಜನಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಯಕರ ಪೂಜಾರಿ ಗುಲ್ವಾಡಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶ್ರೀ ಚಿಕ್ಕಮ್ಮ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ್ ಕಾಮಧೇನು ಸಹಕರಿಸಿದರು. ಆಡಳಿತ ಮಂಡಳಿ ಸದಸ್ಯರಾದ ವೆಂಕಟೇಶ್ ಬೀಡಿ, ಸೂರ್ಯನಾರಾಯಣ್, ಎ.ಗಣೇಶ್, ನರಸಿಂಹ ಮೇಲ್ಮನೆ, ಯುವ ಮಿತ್ರ ಮಂಡಲ ಅಧ್ಯಕ್ಷ ನಾಗರಾಜ್ ಕೆಳಮನೆ, ಸದಸ್ಯರಾದ ರಾಜೇಶ್ ಬಿಇ., ಸುರೇಶ್ ಕೆಳಮನೆ, ತಾಲೂಕು ಭಜನಾ ಒಕ್ಕೂಟ ಕಾರ್ಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಹಕ್ಲಾಡಿ, ಅಧ್ಯಕ್ಷ ನಿತಿನ್ ವಿಠಲವಾಡಿ, ಪ್ರಧಾನ ಕಾರ್ಯದರ್ಶಿ ಸರೋಜಾ ವಿ.ಮೂರ್ತಿ, ವಿಷ್ಣುಮೂರ್ತಿ, ಶ್ರೀ ಚಿಕಮ್ಮ ದೇವಿ ಭಜನಾ ಮಂಡಳಿ ಅಧ್ಯಕ್ಷೆ ಮೋಹಿನಿ, ಕಾರ್ಯದರ್ಶಿ ಸುನಂದಾ ಹಾಗೂ ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.