ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಯಕ್ಷಗಾನ ಕ್ಷೇತ್ರದ ಸಾಧಕ ವಿದ್ವಾನ್ ಗಣಪತಿ ಭಟ್ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಪ್ರಾಂಶುಪಾಲ ಕೆ.ಕರುಣಾಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.  
ಜಿಲ್ಲೆ

ಮಹಿಳಾ ಸಬಲೀಕರಣದಿಂದ ಉತ್ತಮ ಸಂಸಾರ

Karthika K.S

ಬೈಂದೂರು: ನಮ್ಮ ದೇಶ ಧಾರ್ಮಿಕ ತಳಹದಿಯ ಮೇಲೆ ನಡೆಯುವ ರಾಷ್ಟ್ರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿದ್ದು, ಪ್ರಜಾಪ್ರಭುತ್ವ ಮಾದರಿಯಲ್ಲಿ ಜನರ ಅಭಿವೃದ್ಧಿಯಾಗುತ್ತಿದೆ. ಮಹಿಳೆಯರು ಸಬಲೀಕರಣಗೊಂಡು ಬುದ್ಧಿವಂತರಾದರೆ ಸಂಸಾರ ಉತ್ತಮ ರೀತಿಯಲ್ಲಿ ಸಾಗುತ್ತದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಕೊಲ್ಲೂರಿನಲ್ಲಿ ಮಂಗಳವಾರ ದೇವಳದ ಅರ್ಚಕ ಕೆ.ಎನ್.ಸತ್ಯನಾರಾಯಣ ಅಡಿಗರ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಪ್ರರು ಪ್ರತಿನಿತ್ಯವು ನಿತ್ಯನೇಮಿತ್ತಿಕ ಕರ್ಮಗಳನ್ನು ಮಾಡುವುದರಿಂದ ಹಾಗೂ ಹಿಂದಿನಿಂದಲೂ ಯಾವುದೇ ಒತ್ತಡಕ್ಕೆ ಮಣಿಯದೆ ಸಂಸ್ಕಾರ, ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿರುವುದರಿಂದ ಸಮಾಜದಲ್ಲಿ ಸುಭಿಕ್ಷೆ ಕಾಣುವಂತಾಗಿದೆ ಎಂದರು.

ಅಡಿಗ ಕುಟುಂಬದ ಹಿರಿಯರಾದ ಕೆ.ಎನ್.ಶ್ರೀಧರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಪ್ರಸನ್ನಾ ಶರ್ಮಾ, ಮಾಜಿ ಅಧ್ಯಕ್ಷ ಶಿವರಾಮಕೃಷ್ಣ ಭಟ್, ಸಂಸ್ಕೃತ ಪ್ರಾಧ್ಯಾಪಕ ಡಾ.ಗೋಪಾಲಕೃಷ್ಣ ಭಟ್, ಕೂಟ ಜಗತ್ತು ಅಧ್ಯಕ್ಷ ಸತೀಶ ಹಂದೆ, ಅಪರ್ಣಾ ಎಸ್.ಅಡಿಗ ಉಪಸ್ಥಿತರಿದ್ದರು. ರಾಧಿಕಾ ಅಡಿಗ ಪ್ರಾರ್ಥಿಸಿದರು. ಸತ್ಯನಾರಾಯಣ ರಾವ್ ನಿರೂಪಿಸಿದರು.

ಯಕ್ಷಗಾನ ಕ್ಷೇತ್ರದ ಸಾಧಕ ವಿದ್ವಾನ್ ಗಣಪತಿ ಭಟ್ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಪ್ರಾಂಶುಪಾಲ ಕೆ.ಕರುಣಾಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ನೃತ್ಯವೈಭವ ಹಾಗೂ ಸಾರಂಗ್ ಕುಂದಾಪುರ ತಂಡದವರಿಂದ ಗಾನವೈಭವ ನಡೆಯಿತು.