Actor Venkatesh in Bengaluru 
ಬೆಂಗಳೂರು

ವಿದ್ಯಾರ್ಥಿ ಭವನದಲ್ಲಿ ಮಸಾಲ ದೋಸೆ, ಇಡ್ಲಿ ಸವಿದ ಟಾಲಿವುಡ್ ಸ್ಟಾರ್ ವೆಂಕಟೇಶ್​; ನಟನ ಸರಳತೆಗೆ ಫ್ಯಾನ್ಸ್ ಫಿದಾ..Venkatesh in Bengaluru

Actor Venkatesh in Bengaluru:ತನ್ನ ಸರ್ವಿಂಗ್ ಶೈಲಿ ಮತ್ತು ಮಸಾಲೆ ದೋಸೆಗೆ 1943ರಿಂದ ಬಸವನಗುಡಿಯ ಗಾಂಧಿ ಭವನದಲ್ಲಿರುವ ವಿದ್ಯಾರ್ಥಿಭವನ(vidyarthi Bhavan) ಫೇಮಸ್ಸು. ವಿದ್ಯಾರ್ಥಿ ಭವನ ಅತ್ಯಂತ ಹಳೆಯ ಮತ್ತು ಪ್ರಸಿದ್ಧ ಸಸ್ಯಾಹಾರಿ ಉಪಹಾರ ಮಂದಿರಗಳಲ್ಲಿ ಒಂದು. ಹಲವು ದಶಕಗಳಿಂದ ತನ್ನ ವಿಶಿಷ್ಟ ರುಚಿ ಮತ್ತು ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಸಿನಿಮಾ, ಕ್ರೀಡೆ, ರಾಜಕೀಯ ಗಣ್ಯರು, ದೇಶಿಯ ಮತ್ತು ವಿದೇಶಿ ಗಣ್ಯರು ಇಲ್ಲಿ ಬಂದು ದೋಸೆ ಸವಿಯುತ್ತಾರೆ. ಹಾಗಾಗಿ, ಈ ಹೋಟೆಲ್ ಆಗಾಗ ಸುದ್ದಿಯಲ್ಲಿರುತ್ತದೆ.
ಇಡ್ಲಿ, ದೋಸೆ ಸವಿದ ವೆಂಕಟೇಶ್
​ವೆಂಕಟೇಶ್ ಅವರು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿದ್ಯಾರ್ಥಿ ಭವನಕ್ಕೆ ತೆರಳಿದ್ದಾರೆ. ಮೊದಲಿಗೆ ಮೃದುವಾದ ಇಡ್ಲಿ, ವಡಾ ಸಾಂಬರ್​ ಸವಿದ ಅವರು ನಂತರ ಬಿಸಿಬೇಳೆ ಬಾತ್ ಸವಿದರು. ಕೊನೆಗೆ ಇಲ್ಲಿನ ಫೇಮಸ್ ಖಾದ್ಯ ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿಯನ್ನು ಸವಿದಿದ್ದಾರೆ.
ನಟ ವೆಂಕಟೇಶ್​ ಅವರು ಹೋಟೆಲ್‌ಗೆ ಬಂದ ಸುದ್ದಿ ತಿಳಿದು ಸುತ್ತಮುತ್ತಲಿನ ಅಭಿಮಾನಿಗಳು ಮುಗಿಬಿದ್ದರು. ವೆಂಕಟೇಶ್ ಅವರು ತಾನೊಬ್ಬ ಸೆಲಬ್ರೆಟಿ ಅನ್ನೋದನ್ನ ತೋರ್ಪಡಿಸಿಕೊಳ್ಳದೆ ಸರಳವಾಗಿ ಹೋಟೆಲ್‌ನಲ್ಲಿ ಕುಳಿತು ತಿಂಡಿ ಸವಿದಿದ್ದಾರೆ. ನಂತರ ವಿದ್ಯಾರ್ಥಿ ಭವನದ ಆಡಳಿತ ವರ್ಗದ ಜೊತೆಗೆ ಮಾತನಾಡಿ, ಒಂದು ಪುಸ್ತಕದಲ್ಲಿ ತಮ್ಮ ರಿವ್ಯೂವ್​ ಬರೆದಿದ್ದಾರೆ.

ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್​

​ವಿದ್ಯಾರ್ಥಿ ಭವನದ ಅಧಿಕೃತ ಸೋಷಿಯಲ್ ಮೀಡಿಯಾ ಪುಟದಲ್ಲೂ ಈ ಕುರಿತು ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿದ್ಯಾರ್ಥಿ ಭವನಕ್ಕೆ ನಟ ವೆಂಕಟೇಶ್ ದಗ್ಗುಬಾಟಿ ಅವರನ್ನು ಸ್ವಾಗತಿಸಲು ನಮಗೆ ಹೆಮ್ಮೆ ಎನಿಸುತ್ತದೆ. ಅವರು ನಮ್ಮ ಮಸಾಲೆ ದೋಸೆ ಮತ್ತು ಕಾಫಿಯನ್ನು ಆನಂದಿಸಿದರು ಎಂದು ಪೋಸ್ಟ್ ಹಂಚಿಕೊಳ್ಳಲಾಗಿದೆ, (ಏಜೆನ್ಸೀಸ್).​​