ಜನತಾ ಸೇವಾ ಕೋ-ಆಪರೇಟಿವ್ ಬ್ಯಾಂಕ್  
ಬೆಂಗಳೂರು

ಜನತಾ ಸೇವಾ ಬ್ಯಾಂಕ್‌ಗೆ 23.08 ಕೋಟಿ ರೂ.ಲಾಭ-bank profit

ಬೆಂಗಳೂರು: ಜನತಾ ಸೇವಾ ಕೋ-ಆಪರೇಟಿವ್ ಬ್ಯಾಂಕ್,2025-26ನೇ ಸಾಲಿನಲ್ಲಿ 23.08 ಕೋಟಿ ರೂ.ಲಾಭ ಗಳಿಸಿದೆ.
ಐದು ಶಾಖೆ ಹೊಂದಿರುವ ಈ ಬ್ಯಾಂಕಿನ ಒಟ್ಟು ಅನುತ್ಪಾದಕ ಆಸ್ತಿ ಶೇ.3.70 ಇದ್ದು, ನಿವ್ವಳ ಅನುತ್ಪಾದಕ ಸಾಲ ಪ್ರಮಾಣ ಶೂನ್ಯಕ್ಕೆ ಇಳಿದಿದೆ. ಕಳೆದ ವರ್ಷದಲ್ಲಿ 1500 ಕೋಟಿ ರೂ.ಠೇವಣಿ ಸಂಗ್ರಹಣೆಯಾಗಿದೆ.ಷೇರುದಾರರಿಗೆ ಕಡಿಮೆ ಬಡ್ಡಿದರದಲ್ಲಿ ವಿವಿಧ ಸಾಲ ಸೌಲಭ್ಯ ನೀಡುತ್ತಿರುವ ಬ್ಯಾಂಕ್, 942.50 ಕೋಟಿ ರೂ.ಸಾಲ ಮತ್ತು ಮುಂಗಡ ನೀಡಿದೆ. 722 ಕೋಟಿ ರೂ.ಹೂಡಿಕೆ ಮಾಡಿದ್ದು, ಬ್ಯಾಂಕಿನಲ್ಲಿ ಅಪದ್ಧನ ನಿಧಿ ಮತ್ತು ಇತರೆ ನಿಧಿಗಳು 232.52 ಕೋಟಿ ರೂ.ದಾಟಿದೆ.
ಬ್ಯಾಂಕಿನಲ್ಲಿ ಒಟ್ಟು 14,540 ಷೇರುದಾರರುಗಳಿದ್ದು, ಒಟ್ಟು ಷೇರು ಬಂಡವಾಳ 36.62 ಕೋಟಿಗೂ ಮೀರಿದೆ. ಅಂದಾಜು 42,000 ಗ್ರಾಹಕರುಗಳನ್ನು ಹೊಂದಿದ್ದು, ಬ್ಯಾಂಕ್, ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯ ಮತ್ತು ಠೇವಣಿಗಳ ಮೇಲೆ ಆಕರ್ಷಕ ಬಡ್ಡಿದರ ನೀಡುತ್ತಿದೆ.
1996ರಲ್ಲಿ ನಮ್ಮ ಬ್ಯಾಂಕ್ ಪ್ರಾರಂಭಗೊಂಡು ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆ ನೀಡುತ್ತಾ ಬರುತ್ತಿದೆ.
ಷೇರು ಸಂಗ್ರಹ, ಸ್ವಂತ ನಿಧಿ ಕ್ರೋಢೀಕರಣ, ಠೇವಣಿ ಸಂಗ್ರಹಣೆ, ಸಾಲ ಮತ್ತು ಲಾಭ ಗಳಿಕೆಯಲ್ಲಿ ರಾಜ್ಯದ ಎಲ್ಲ ಪಟ್ಟಣ ಸಹಕಾರ ಬ್ಯಾಂಕುಗಳಗಿಂತ ನಮ್ಮ ಬ್ಯಾಂಕ್ ಮುಂದಿದೆ. ಉತ್ತಮ ಆರ್ಥಿಕ ಪ್ರಗತಿಗೆ ಕಾರಣೀಭೂತರಾದ ಷೇರುದಾರರಿಗೆ, ಗ್ರಾಹಕರಿಗೆ, ಆರ್ಥಿಕ ಪ್ರಗತಿ ಸಾಧಿಸಲು ಸಹಕರಿಸಿದ ಆಡಳಿತ ಮಂಡಳಿ ನಿರ್ದೇಶಕರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಅಭನಂದನೆ ಸಲ್ಲಿಸುವುದಾಗಿ ಬ್ಯಾಂಕಿನ ಅಧ್ಯಕ್ಷ ಎಚ್.ಸಿ. ಗೋಪಾಲ್ ಹೇಳಿದ್ದಾರೆ.