ಜಿಲ್ಲೆ

ಟೆಕ್ಕಿ ಮೈಮೇಲೆ ಉಗಿದ ಆಟೋ ಚಾಲಕ! 'ಎಕ್ಸ್​'ನಲ್ಲಿ ಪೋಸ್ಟ್​ ವೈರಲ್​

ಬೆಂಗಳೂರು: ಇಂದಿರಾನಗರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಟೋ ಚಾಲಕನೊಬ್ಬ ತನ್ನ ಮೇಲೆ ಉಗುಳಿದ್ದಾನೆ ಎಂದು ಮಹಿಳಾ ಟೆಕ್ಕಿಯೊಬ್ಬರು ​'ಎಕ್ಸ್​' ಖಾತೆಯಲ್ಲಿ ಫೋಟೋ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಗರ ಪೊಲೀಸರು ಸ್ಪಂದಿಸಿದ್ದು, ಘಟನೆ ನಡೆದ ಸ್ಥಳದ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ. ಆಟೋ ಚಾಲಕ ಪಾನ್​ ಸೇವಿಸಿ ಉಗುಳಿರುವ ಬಗ್ಗೆ 'ಎಕ್ಸ್​' ಖಾತೆಯಲ್ಲಿ ಮಂಗಳವಾರ ಪೋಸ್ಟ್​ ಮಾಡಿದ್ದಾರೆ. ಸದ್ಯ ಈ ಪೋಸ್ಟ್​ಗೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದ್ದು, 6.5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.