ಜಿಲ್ಲೆ

ಒಂದು ಮುತ್ತಿಗೆ 50 ಸಾವಿರ ರೂಪಾಯಿ... ಲಕ್ಷ ಲಕ್ಷ ಹಣ ಪೀಕಿ ತಗ್ಲಾಕ್ಕೊಂಡ ಖತರ್ನಾಕ್​ ಶಿಕ್ಷಕಿ! Bengaluru Teacher

Bengaluru Teacher : ಕೇವಲ ಒಂದು ಮುತ್ತಿಗೆ ಬರೋಬ್ಬರಿ 50 ಸಾವಿರ ರೂಪಾಯಿ. ಇದು ಬೆಂಗಳೂರಿನ ಖತರ್ನಾಕ್​ ಶಿಕ್ಷಕಿಯ ಕರಾಳ ಕಥೆ. ಮುತ್ತಿನ ಮೂಲಕವೇ ಲಕ್ಷ ಲಕ್ಷ ರೂಪಾಯಿ ಸಂಪಾದಿಸುತ್ತಿದ್ದವಳು ಇದೀಗ ಸಿಸಿಬಿ ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದಿದ್ದಾಳೆ.

ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಶ್ರೀದೇವಿ ಎಂಬಾಕೆ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಾಳೆ. ಆಕೆ ಪ್ರಿಸ್ಕೂಲ್‌ ನಡೆಸುತ್ತಿದ್ದಳು. ರಾಕೇಶ್ ಎಂಬ ವ್ಯಕ್ತಿಯ ಇಬ್ಬರು ಮಕ್ಕಳು ಅದೇ ಶಾಲೆಯಲ್ಲಿ ಓದುತ್ತಿದ್ದಾರೆ. ಆತ ಆಗಾಗ ತನ್ನ ಮಕ್ಕಳನ್ನು ಶಾಲೆಗೆ ಬಿಡಲು ಮತ್ತು ಕರೆದುಕೊಂಡು ಬರಲು ಶಾಲೆಗೆ ಹೋಗುತ್ತಿದ್ದಂತೆ, ಶ್ರೀದೇವಿಯೊಂದಿಗೆ ಪರಿಚಯ ಬೆಳೆಯಿತು.

ಇದೇ ಪರಿಚಯದ ನಂತರ ಸ್ನೇಹಕ್ಕೆ ತಿರುಗಿ, ಡೇಟಿಂಗ್​ ಹಂತಕ್ಕೂ ತಲುಪಿತು. ರಾಕೇಶ್​ರನ್ನು ತನ್ನ ಬುಟ್ಟಿಗೆ ಹಾಕಿಕೊಂಡ ಶ್ರೀದೇವಿ ಒಂದು ಮುತ್ತಿಗೆ 50 ಸಾವಿರ ರೂ. ಪಡೆಯುತ್ತಿದ್ದಳು. ಅಲ್ಲದೆ, ಅದರ ಫೋಟೋ ತೆಗೆದುಕೊಂಡು ಇಟ್ಟುಕೊಳ್ಳುತ್ತಿದ್ದಳು. ಇದರ ನಡುವೆ ಆಕೆ ರಾಕೇಶ್‌ನ ಬಳಿ 2 ಲಕ್ಷ ರೂ. ಸಾಲ ಕೇಳಿದ್ದಳು. ಉದ್ಯಮಿಯಾಗಿದ್ದ ರಾಕೇಶ್​ ಹಣ ಕೊಡುವುದಾಗಿ ಭರವಸೆ ನೀಡಿದ್ದ. ಅಲ್ಲದೆ, ಹಣವನ್ನು ಸಹ ಕೊಟ್ಟನು.

ಮಾರ್ಚ್ ತಿಂಗಳಲ್ಲಿ ಹಣ ಕೊಡುವುದಾಗಿ ಶ್ರೀದೇವಿ ಹೇಳಿದ್ದಳು. ಆದರೆ, ಗಡುವು ಮುಗಿದರೂ ಹಣ ನೀಡಲಿಲ್ಲ. ಇದರ ನಡುವೆ ತನ್ನ ಪ್ರೀ ಸ್ಕೂಲ್​ಗೆ ಪಾಲದಾರನಾಗುವಂತೆ ಆಕೆ ಒತ್ತಾಯಿಸಿದಳು. ಆದರೆ, ಇದು ಇಷ್ಟವಿಲ್ಲದೇ ರಾಕೇಶ್​ ಆಕೆಯಿಂದ ಅಂತರವನ್ನು ಕಾಯ್ದುಕೊಳ್ಳುತ್ತಿದ್ದನು. ಇದಾದ ಬಳಿಕ ಆತನನ್ನು ಬ್ಲಾಕ್​ಮೇಲ್​ ಮಾಡಲು ಮುಂದಾಗಳು.

ರಾಕೇಶ್​ನನ್ನು ಹೆದರಿಸಲು ಅರುಣ್​ ಮತ್ತು ಸಾಗರ್​ ಹೆಸರಿನ ಇಬ್ಬರ ನೆರವು ಪಡೆದ ಶ್ರೀದೇವಿ, ತನ್ನ ಬಳಿ ಇದ್ದ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿ ಬ್ಲಾಕ್​ಮೇಲ್​ ಮಾಡಲು ಆರಂಭಿಸಿದಳು. ರಾಕೇಶ್​, ಶ್ರೀದೇವಿ ಜತೆ ಚಾಟಿಂಗ್​ ಕೂಡ ನಡೆಸಿದ್ದು. ಎಲ್ಲವನ್ನು ಬಹಿರಂಗಪಡಿಸುತ್ತೇನೆ. ಚಾಟ್​ ಡಿಲೀಟ್​ ಮಾಡಬೇಕೆಂದರೆ, 50 ಲಕ್ಷ ರೂ. ಕೊಡು ಎಂದು ಬೇಡಿಕೆ ಇಟ್ಟಿದ್ದಳು. ಅಷ್ಟೇ ಅಲ್ಲದೆ, ತನ್ನ ಬಳಿ ಇರುವ ಫೋಟೋ ಮತ್ತು ವಿಡಿಯೋವನ್ನು ಡಿಲೀಟ್​ ಮಾಡಲು 1 ಕೋಟಿ ರೂಪಾಯಿಗೆ ಶ್ರೀದೇವಿ ಬೇಡಿಕೆ ಇಟ್ಟಿದ್ದಳು.

ಶ್ರೀದೇವಿಯ ಬ್ಲಾಕ್​ಮೇಲ್​ಗೆ ಹೆದರಿದ ರಾಕೇಶ್​ ಆರಂಭದಲ್ಲಿ 20 ಲಕ್ಷ ರೂ. ಕೊಡಲು ಒಪ್ಪಿಕೊಂಡಿದ್ದ. ಅಲ್ಲದೆ, ಅದೇ ಸಮಯದಲ್ಲಿ ಆತ 1.50 ಲಕ್ಷ ರೂ. ಹಣ ಸಹ ನೀಡಿದ್ದ. ಯಾವಾಗ ಅವರಿಂದ ಹಣಕ್ಕಾಗಿ ಕಿರುಕುಳ ಜಾಸ್ತಿಯಾದಾಗ ರಾಕೇಶ್​, ಪೊಲೀಸರನ್ನು ಸಂಪರ್ಕಿಸಿ, ದೂರು ಸಹ ದಾಖಲಿಸಿದನು. ಪ್ರಕರಣ ದಾಖಲಿಸಿದ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿ, ಶ್ರೀದೇವಿ ಗ್ಯಾಂಗ್​ ಅನ್ನು ಖೆಡ್ಡಾಗೆ ಕೆಡವಿದ್ದಾರೆ.

ಮೂವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)