Rapido: ರ‍್ಯಾಪಿಡೊದಲ್ಲಿ ಪ್ರಯಾಣ ಮಾಡುವ ವೇಳೆ ತನ್ನ ಇಯರ್ ಫೋನ್ ಗಳನ್ನು ಬಿಟ್ಟು ಹೋಗಿದ್ದ ಬೆಂಗಳೂರಿನ ಮಹಿಳೆಯೊಬ್ಬಳ ಆಟೋ ಚಾಲಕˌ ಆಕೆ ಮಾಡಿದ್ದ ಗೂಗಲ್ ಪೇ ಪೇಮೆಂಟ್ ಮೂಲಕ ಸಂಪರ್ಕಿಸಿˌ ಅವುಗಳನ್ನು ಹಿಂತಿರುಗಿಸಿರುವ ಘಟನೆ ಭಾನುವಾರ (ಅ.26) ನಡೆದಿದ್ದು, ಚಾಲಕನ ಪ್ರಾಮಾಣಿಕತೆಯ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಲಿಂಕ್ಡ್ಇನ್ನಲ್ಲಿ ವೈರಲ್ ಆಗಿರುವ ಫೋಸ್ಟ್ನಲ್ಲಿ ಸಂಭವಿ ಶ್ರೀವಾಸ್ತವ ಎಂದು ಗುರುತಿಸಲ್ಪಡುವ ಮಹಿಳೆಯು ತನ್ನ ಇಯರ್‌ಫೋನ್‌ಗಳನ್ನು ಚಾಲಕನು ಹಿಂತಿರುಗಿಸಲು ಪ್ರಯತ್ನಿಸಿದ ದಯೆ ಮತ್ತು ಪ್ರಾಮಾಣಿಕತೆಯ ಬಗ್ಗೆ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ನೀವು ಮದುವೆಯಾಗದಿದ್ದರೆ 29 ಲಕ್ಷ ರೂ. ನೀಡುತ್ತೇನೆ! ಹೆಣ್ಣುಮಕ್ಕಳಿಗೆ ಬಂಪರ್ ಆಫರ್ ಕೊಟ್ಟ ತಾಯಿ..Mother
ಇತ್ತೀಚೆಗೆ ಸಂಜೆ ಕೆಲಸ ಮುಗಿಸಿ ಊಟಕ್ಕೆ ತನ್ನ ಸಹೋದರನನ್ನು ಭೇಟಿಯಾಗುವ ಉದ್ದೇಶದಿಂದ ಇಂದಿರಾನಗರದಲ್ಲಿ ಒಂದು ಸಣ್ಣ ರ‍್ಯಾಪಿಡೋ ಆಟೋವನ್ನು ಬುಕ್ ಮಾಡಿದ್ದೆ. ಪ್ರಯಾಣವು ಕೇವಲ 10 ನಿಮಿಷಗಳ ಕಾಲ ನಡೆಯಿತು. ನಾನು ಪ್ರಯಾಣವನ್ನು ತಲುಪಿದ ನಂತರ ಇಯರ್‌ಫೋನ್‌ಗಳನ್ನು ಹಿಂದೆ ಬಿಟ್ಟು ಹೋಗಿರುವುದನ್ನು ಅರಿತುಕೊಂಡೆ.
ಇದಾದ ಕೆಲವೇ ನಿಮಿಷಗಳಲ್ಲಿ ಶ್ರೀವಾಸ್ತವ ಅವರಿಗೆ ಗೂಗಲ್ ಪೇನಲ್ಲಿ ರ‍್ಯಾಪಿಡೋ ಚಾಲಕ ಜಹ್ರುಲ್ನಿಂದ ಸಂದೇಶ ಬಂದಿತು. ಆಗ ನಾನು ಖಂಡಿತ ಗಾಬರಿಗೊಂಡಿದ್ದೆ. ನನ್ನ ಮೇಲೆ ಎರಡು ಬಾರಿ ಶುಲ್ಕ ವಿಧಿಸಲಾಗಿದೆ ಎಂದು ನಾನು ಭಾವಿಸಿದೆ. ಆದರೆ ಈ ಸಂದೇಶದಲ್ಲಿ ನಿಮ್ಮ ಇಯರ್‌ಫೋನ್‌ಗಳನ್ನು ಬಿಟ್ಟುಹೋಗಿದ್ದೀರ ಎಂದು ಬರೆದಿದ್ದರು.
ನಂತರ ಜಹ್ರುಲ್ ಇಯರ್‌ಫೋನ್‌ಗಳನ್ನು ಸುರಕ್ಷಿತವಾಗಿ ಇಡುವುದಾಗಿ ಭರವಸೆ ನೀಡಿದ್ದರು. ನಂತರ ಚಾಲಕನು ನಾನು ಇರುವಂತಹ ಕಚೇರಿ ಬಳಿಗೆ ಬಂದು ನನ್ನ ಇಯರ್‌ಫೋನ್‌ಗಳನ್ನು ಕೊಟ್ಟು ಹೋಗಿದ್ದಾರೆ ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಶ್ರೀವಾಸ್ತವ ಅವರು ಚಾಲಕನ ಪ್ರಾಮಾಣಿಕತೆಗೆ ಕೃತಜ್ಞತೆ ವ್ಯಕ್ತಪಡಿಸಿದ್ದು, ಜಹ್ರುಲ್ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅವುಗಳನ್ನು ಎಸೆಯಬಹುದಿತ್ತು ಅಥವಾ ಮಾರಾಟ ಮಾಡಬಹುದಿತ್ತು. ಆದರೆ ಅವರು ಅವುಗಳನ್ನು ಹಿಂದಿರುಗಿಸಲು ಆಯ್ಕೆ ಮಾಡಿಕೊಂಡರು. ಇದು ತುಂಬಾ ಸಣ್ಣ ವಿಷಯವೆಂದು ತೋರುತ್ತದೆ, ಆದರೆ ಅದು ನಿಜವಾಗಿಯೂ ಸಭ್ಯತೆ ಇನ್ನೂ ಅಸ್ತಿತ್ವದಲ್ಲಿದೆ ಎಂದು ತಿಳಿದುಬರುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಪರಿಸ್ಥಿತಿ ಏನೇ ಇರಲಿ ಈ 3 ರಾಶಿಯವರು ಸತ್ಯವನ್ನೇ ಮಾತನಾಡುತ್ತಾರಂತೆ! ನೀವೂ ಇದೇ ರಾಶಿನಾ? Zodiac Signs
ಸಂಭವಿ ಹಂಚಿಕೊಂಡ ಪಠ್ಯ ವಿನಿಮಯದಲ್ಲಿ ಪ್ರಯಾಣಕ್ಕಾಗಿ 70 ರೂ ಗಳನ್ನು ನೀಡಿದ್ದಾರೆ. ಇದಾದ ಬಳಿಕ ಚಾಲಕ ಮೇಡಂ ನಿಮ್ಮ ಇಯರ್‌ಫೋನ್‌ಗಳನ್ನು ಮರೆತು ಹೋಗಿದ್ದೀರಿ. ಇದು ನನ್ನ ಮೊಬೈಲ್ ಸಂಖ್ಯೆ. ಇದಕ್ಕೆ ಕರೆ ಮಾಡಿ ನಿಮ್ಮ ವಸ್ತುಗಳನ್ನು ಪಡೆಯಿರಿ ಎಂದು ಸಂದೇಶ ಕಳುಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಭವಿ ನಿಮ್ಮ ಹತ್ತಿರ ಇಟ್ಟುಕೊಳ್ಳಿ ನಾಳೆ ಬಂದು ಪಡೆದುಕೊಳ್ಳುತ್ತೇನೆ ಎಂದು ಬರೆದಿದ್ದರು.
ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ ರ‍್ಯಾಪಿಡೋ ಸಂಸ್ಥೆಯು ಇಂತಹ ಹೃದಯಸ್ಪರ್ಶಿ ಅನುಭವಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸಂಭವಿ. ನಾವೆಲ್ಲರೂ, ಚಾಲಕನ ಪ್ರಾಮಾಣಿಕತೆ ನೋಡಿ ಆಶ್ಚರ್ಯರಾಗಿದ್ದೇವೆ. ಅವರಂತಹ ಜನರು ನಿಜವಾಗಿಯೂ ವ್ಯತ್ಯಾಸವನ್ನುಂಟು ಮಾಡುತ್ತಾರೆ. ಅವರು ರಾಪಿಡೊ ಕುಟುಂಬದ ಭಾಗವಾಗಿರುವುದಕ್ಕೆ ನಮಗೆ ಹೆಮ್ಮೆಯಿದೆ ಎಂದು ಕಂಪನಿಯು ಚಾಲಕನ ಪ್ರಾಮಾಣಿಕತೆಯನ್ನು ಶ್ಲಾಘಿಸಿದೆ.
ಈ ಪೋಸ್ಟ್ ವೈರಲ್ ಆದ ನಂತರ ಸಾಮಾಜಿಕ ಮಾಧ್ಯಮದ ಬಳಕೆದಾರರು ಚಾಲಕನ ಸಮಗ್ರತೆಯನ್ನು ಶ್ಲಾಘಿಸಿದ್ದು, ಈ ಸಂಕ್ಷಿಪ್ತ ಸಂವಹನವು ಸಣ್ಣ ಸಭ್ಯತೆಯ ಕಾರ್ಯಗಳು ಇನ್ನೂ ದೊಡ್ಡ ವ್ಯತ್ಯಾಸವನ್ನುಂಟುಮಾಡಬಹುದು ಎಂಬುದನ್ನು ನೆನಪಿಸುತ್ತದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)