Bengaluru: ಇತ್ತೀಚಿನ ದಿನಗಳಲ್ಲಿ ನಾವು ಕರ್ನಾಟಕದಲ್ಲಿ ಭಾಷೆಗಾಗಿ ವಿವಾದ ನಡೆದ ಅನೇಕ ವಿಡಿಯೋ, ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೀಡಿರುತ್ತೇವೆ. ಆದರೆ ಇದನ್ನೂ ಮೀರಿ ಗುರುತುಪರಿಚಯ ಇಲ್ಲದ ದೆಹಲಿ ಮೂಲದ ವ್ಯಕ್ತಿಗೆ ಬೆಂಗಳೂರಿನ ಕುಟುಂಬವೊಂದು ಮನೆಯೂಟ ಮಾಡಿ ಬಡಿಸಿದ ಹೃದಯಸ್ಪರ್ಶಿ ವಿಡಿಯೋ ಇದೀಗ ವೈರಲ್ ಆಗಿದೆ. ಹಾಗಾದ್ರೆ ಆ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋವನ್ನು ದೆಹಲಿಯ ವ್ಯಕ್ತಿ ಇನ್ಫ್ಲುಯೆನ್ಸರ್ ಮತ್ತು ಸ್ಟಾರ್ಟ್‌ಅಪ್ ಸಂಸ್ಥಾಪಕರಾದ ಸದೀವ್ ಸಿಂಗ್ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಟೆಸ್ಟ್ ನಿವೃತ್ತಿಗೆ ಒತ್ತಾಯಿಸಿದ್ದು ಯಾರು? ಭಾರತದ ಮಾಜಿ ಬೌಲಿಂಗ್ ಕೋಚ್ ಬಿಚ್ಚಿಟ್ಟ ರಹಸ್ಯವಿದು… Virat Kohli
ಸದೀಶ್ ಸಿಂಗ್ ಅವರು ಬೆಂಗಳೂರಿನ ಮನೆಯಲ್ಲಿ ಮನೆಯೂಟದ ರುಚಿ ಸವಿಯಬೇಕು ಎನ್ನುವ ಆಸೆಯನ್ನು ಹೊಂದಿದ್ದರು, ಹೀಗಿರುವಾಗ ಸಿಂಗ್ ರಸ್ತೆಯಲ್ಲಿ ಸಿಂಗ್ ಓಡಾಡುತ್ತಾ ಒಂದು ಮನೆಗೆ ತಲುಪಿದ್ದಾರೆ. ಆ ಮನೆಯ ಗೇಟ್ ಬಳಿ ನಿಂತು ವಿನಮ್ರವಾಗಿ, "ಮೇಡಂ, ನಾನು ದೆಹಲಿವನು ಮತ್ತು ನಾನು ಸಾಂಪ್ರದಾಯಿಕ ಸ್ಥಳೀಯ ಉಪಹಾರವನ್ನು ಪ್ರಯತ್ನಿಸಲು ಇಷ್ಟಪಡುತ್ತೇನೆ. ನಾನು ನಿಮ್ಮ ಮನೆಯಲ್ಲಿ ತಿನ್ನಬಹುದೇ?" ಎಂದು ಆ ಮನೆಯ ಮಹಿಳೆಯ ಬಳಿ ಕೇಳುತ್ತಾರೆ.
ಆ ಮಹಿಳೆ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡದೇ ಒಳಗೆ ಹೋಗಿ ಕೇಳಿ ಬರುತ್ತೇನೆ ಎಂದು ಹೇಳಿ, ಕೆಲವು ಕ್ಷಣಗಳ ನಂತರ, ಮನೆಯ ಪುರುಷ ಹೊರಬಂದು ಸಿಂಗ್ ಅವರನ್ನು ನಗುವಿನೊಂದಿಗೆ ಸ್ವಾಗತಿಸುತ್ತಾರೆ.
ಸಿಂಗ್ ಅವರಿಗೆ ಆ ಕುಟುಂಬವು ಬಿಸಿಬಿಸಿಯಾದ ರಾಗಿ ಮುದ್ದೆ ಜೊತೆ ಚಿಕನ್ ಸಾಂಬಾರ್ ಬಡಿಸುತ್ತಾರೆ. ಆ ರುಚಿಯಾದ ಊಟವನ್ನು ಹೊಟ್ಟೆ ತುಂಬಾ ತಿಂದು ಸದೀಶ್, ಆ ಕುಟುಂಬದ ಮಹಿಳೆಯ ಪಾದಗಳಿಗೆ ನಮಸ್ಕರಿಸುತ್ತಾರೆ.
ಊಟ ತುಂಬಾನೇ ಚೆನ್ನಾಗಿತ್ತು, ನಿಜವಾಗಿಯೂ ಬೆಂಗಳೂರಿನ ಜನ ತುಂಬಾನೇ ಒಳ್ಳೆಯವರು ಎಂದು ಹೇಳಿ ಅಲ್ಲಿಂದ ಹೊರಡುತ್ತಾರೆ.
ಈ ವೈರಲ್ ವಿಡಿಯೋ 33 ಲಕ್ಷಕ್ಕೂ ಅಧಿಕ ವೀಕ್ಷಣೆಯ ಜೊತೆಗೆ ನಟ್ಟಿಗರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ, "ಇದು ನನಗೆ ತುಂಬಾ ಸಂತೋಷ ತಂದಿದೆ. ನೀವು ಅವರನ್ನು ಭೇಟಿ ಮಾಡಿರುವುದು ಅವರಿಗೆ ಅಪಾರ ಸಂತೋಷ ತಂದಿರಬೇಕು. ದಯವಿಟ್ಟು ಅವರನ್ನು ಮತ್ತೆ ಭೇಟಿ ಮಾಡಲು ಪ್ರಯತ್ನಿಸಿ " ಎಂದರೆ, ಮತ್ತೊಬ್ಬರು "ಬಹುಶಃ ಅವರ ಸ್ವಂತ ಮಕ್ಕಳು ದೂರದಲ್ಲಿ ವಾಸಿಸುತ್ತಿರಬಹುದು. ಅವರು ನಿಮ್ಮಲ್ಲಿ ತಮ್ಮ ಮಗನನ್ನು ಕಂಡಿರಬಹುದು. ಅವರೊಂದಿಗೆ ಸಮಯ ಕಳೆದಿದ್ದಕ್ಕಾಗಿ ಧನ್ಯವಾದಗಳು" ಎಂದಿದ್ದಾರೆ. (ಏಜೆನ್ಸೀಸ್)