ಜಿಲ್ಲೆ

ಬೆಳ್ತಂಗಡಿ ಜಮೀಯತುಲ್ ಫಲಾಹ್ ಪದಗ್ರಹಣ

ಸೌಮ್ಯ ಆರ್

ಬೆಳ್ತಂಗಡಿ: ಜಮೀಯತುಲ್ ಫಲಾಹ್‌ನ ಬೆಳ್ತಂಗಡಿ ಘಟಕ ಸಮಿತಿ ಪದಗ್ರಹಣ ಕಾರ್ಯಕ್ರಮ ಬೆಳ್ತಂಗಡಿ ಕೇಂದ್ರ ಕಚೇರಿಯ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.

ನಿಕಟಪೂರ್ವ ಅಧ್ಯಕ್ಷ ಬಿ.ಶೇಖುಂಞ್ಞ ನೂತನ ಅಧ್ಯಕ್ಷ ಖಾಲಿದ್ ಪುಲಾಬೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಇತ್ತೀಚೆಗೆ ಅಗಲಿದ ಜಮೀಯತುಲ್ ಫಲಾಹ್ ಸದಸ್ಯ ಖತಾರ್ ಮುಹಮ್ಮದ್ ಕುಂಞ್ಞ ಅವರಿಗೆ ತಹಲೀಲ್ ಅರ್ಪಿಸಿದರು. ಅಬ್ದುಲ್ ಲತೀಫ್ ಸಾಹೇಬ್ ಜಮೀಯತುಲ್ ಫಲಾಹ್ ಬಗ್ಗೆ ವಿವರಿಸಿದರು.

ಪ್ರಮುಖರಾದ ಅಬ್ದುಲ್ ಲತೀಫ್ ಸಾಹೇಬ್, ಅಬ್ಬೋನು ಮದ್ದಡ್ಕ, ಉಮರ್ ಬೆಳ್ತಂಗಡಿ, ಅಕ್ಬರ್ ಬೆಳ್ತಂಗಡಿ, ಆಲಿಯಬ್ಬ ಪುಲಾಬೆ, ಇಲ್ಯಾಸ್ ಕರಾಯ, ಕೆ.ಎಸ್.ಅಬ್ದುಲ್ಲಾ, ಉಮರ್ ನಾಡ್ಜೆ, ಮಹಮ್ಮದ್ ಉಜಿರೆ, ಎಸ್.ಎಂ.ಕೋಯ, ಕೆ.ಎಸ್.ಅಬೂಬಕ್ಕರ್, ಖಾಸಿಂ ಕಿಲ್ಲೂರು, ಅಬ್ಬೋನು ಮದ್ದಡ್ಕ, ಉಮರ್ ಬೆಳ್ತಂಗಡಿ, ಅಕ್ಬರ್ ಬೆಳ್ತಂಗಡಿ, ಆಲಿಯಬ್ಬಾ ಪುಲಾಬೆ, ಇಲ್ಯಾಸ್ ಕರಾಯ, ಕೆ.ಎಸ್.ಅಬ್ದುಲ್ಲಾ, ಉಮರ್ ನಾಡ್ಜೆ, ಮಹಮ್ಮದ್ ಉಜಿರೆ, ಎಸ್.ಎಂ.ಕೋಯ, ಕೆ.ಎಸ್.ಅಬೂಬಕ್ಕರ್, ಖಾಸಿಂ ಕಿಲ್ಲೂರು ಉಪಸ್ಥಿತರಿದ್ದರು. ಆಲಿಯಬ್ಬ ಪುಲಾಬೆ ಸ್ವಾಗತಿಸಿದರು. ಇಬ್ರಾಹಿಂ ಮುಸ್ಲಿಯಾರ್ ವಂದಿಸಿದರು.