ಬಳ್ಳಾರಿಯಲ್ಲಿ ಗುರುವಾರ ವಿಜಯವಾಡದ ಪಿ.ವಿ.ಎನ್.ಕೃಷ್ಣ ಅವರಿಗೆ ರಾಜ್ಯಮಟ್ಟದ ಬಳ್ಳಾರಿ ರಾಘವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಳ್ಳಾರಿಯ ಲಾಲ್ ರೆಡ್ಡಿ ಮತ್ತು ಅನಂತಪುರಂ ಜಿಲ್ಲೆಯ ಚಕ್ರವರ್ತಿ ಬಾಲರಾಜು ಅವರಿಗೆ ಜಿಲ್ಲಾಮಟ್ಟದ ಪ್ರಶಸ್ತಿ ನೀಡಲಾಯಿತು.ಪ್ರಮುಖರಾದ ಎನ್.ಪ್ರಕಾಶ್, ಕೆ.ಕೋಟೇಶ್ವರ ರಾವ್, ಕೆ.ಚನ್ನಪ್ಪ, ಡಿ.ತ್ರಿವೇಣಿ ಇತರರಿದ್ದರು. 
ಜಿಲ್ಲೆ

ಬಳ್ಳಾರಿ ರಾಘವ ಭಾರತದ ಷೇಕ್ಸ್‌ಪಿಯರ್

ಬಳ್ಳಾರಿ: ಬಳ್ಳಾರಿ ರಾಘವ ಅವರು ಬೇರೆ ಬೇರೆ ರಾಷ್ಟ್ರಗಳಲ್ಲಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಅವರು ಭಾರತದ ಷೇಕ್ಸ್ಸ್‌ಪಿಯರ್ ಎಂದರೆ ತಪ್ಪಾಗಲಾರದು ಎಂದು ಶಾಸಕ ನಾರಾ ಭರತ್‌ರೆಡ್ಡಿ ಹೇಳಿದರು.

ರಾಘವ ಪ್ರಶಸ್ತಿ ಪ್ರದಾನ

ನಗರದ ರಾಘವ ಕಲಾಮಂದಿರಲ್ಲಿ ಏರ್ಪಡಿಸಿದ್ದ ಬಳ್ಳಾರಿ ರಾಘವ ಅವರ 143ನೇ ಜಯಂತಿ, ರಾಘವ ಪ್ರಶಸ್ತಿ ಪ್ರದಾನ ಹಾಗೂ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ಗುರುವಾರ ಮಾತನಾಡಿದರು. ರಾಘವರು ದೇಶದ ಘನತೆಯನ್ನು ಹೆಚ್ಚಿಸಿದ್ದಾರೆ. ಅಂತಹ ವ್ಯಕ್ತಿ ಬಳ್ಳಾರಿಯಲ್ಲಿ ಜನಿಸಿದ್ದು ನಮ್ಮ ಸುದೈವ.

ಬಳ್ಳಾರಿ ನಗರದಲ್ಲಿ ಸ್ಕೂಲ್ ಆಫ್ ಆರ್ಟ್ಸ್ ಇಲ್ಲವೇ ಯಾವುದಾದರೂ ಸರ್ಕಾರಿ ಕಾಲೇಜಿಗೆ ಅಥವಾ ಇಂಜಿನಿಯರಿಂಗ್ ಕಾಲೇಜಿಗೆ ರಾಘವರ ಹೆಸರು ಇಡಲು ಉದ್ದೇಶಿಸಲಾಗಿದೆ. ರಾಘವ ಮೆಮೋರಿಯಲ್ ಅಸೋಸಿಯೇಷನ್‌ಗೆ ನಮ್ಮ ಟಚ್ ಫಾರ್ ಲೈಫ್ ಫೌಂಡೇಷನ್‌ನಿಂದ 5 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ತಿಳಿಸಿದರು.


ಪಾಲಿಕೆ ಮೇಯರ್ ಡಿ.ತ್ರಿವೇಣಿ ಮಾತನಾಡಿ, ಮುಂದಿನ ದಿನಗಳಲ್ಲಿ ರಾಘವ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವಂತಾಗಬೇಕು ಎಂದರು.

ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಎನ್.ಪ್ರಕಾಶ್, ಅಧ್ಯಕ್ಷ ಕೆ.ಕೋಟೇಶ್ವರ ರಾವ್, ಗೌರವಾಧ್ಯಕ್ಷ ಕೆ.ಚನ್ನಪ್ಪ, ಉಪಾಧ್ಯಕ್ಷರಾದ ರಮೇಶ್ ಗೌಡ ಪಾಟೀಲ್, ಎಚ್.ವಿಷ್ಣುವರ್ಧನ್ ರೆಡ್ಡಿ, ಖಜಾಂಚಿ ಪಿ.ಧನಂಜಯ, ಜಂಟಿ ಕಾರ್ಯದರ್ಶಿ ಎಂ.ರಾಮಾಂಜನೇಯಲು ಇತರಿದ್ದರು.
ಮೂವರಿಗೆ ಪ್ರಶಸ್ತಿ ಪ್ರದಾನ: ನಂದಿ ಪ್ರಶಸ್ತಿ ಪುರಸ್ಕೃತ ವಿಜಯವಾಡದ ಪಿ.ವಿ.ಎನ್.ಕೃಷ್ಣ ಅವರಿಗೆ ರಾಜ್ಯಮಟ್ಟದ ಬಳ್ಳಾರಿ ರಾಘವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಳ್ಳಾರಿಯ ಲಾಲ್ ರೆಡ್ಡಿ ಮತ್ತು ಅನಂತಪುರಂ ಜಿಲ್ಲೆ ಗುಂತಕಲ್ಲಿನ ಚಕ್ರವರ್ತಿ ಬಾಲರಾಜು ಅವರಿಗೆ ಜಿಲ್ಲಾಮಟ್ಟದ ಪ್ರಶಸ್ತಿ ನೀಡಲಾಯಿತು.