ಬೆಳಗಾವಿ: ಹೈಟೆಕ್ ವೇಶ್ಯಾವಾಟಿಕೆ ಮೇಲೆ ದಾಳಿ ಮಾಡಿದ್ದ ಸಂದರ್ಭದಲ್ಲಿ ರಕ್ಷಣೆಗೆ ಒಳಗಾಗಿದ್ದ ಇಬ್ಬರು ಯುವತಿಯರನ್ನು ಪೊಲೀಸರು ಕುಟುಂಬದ ಸದಸ್ಯರಿಗೆ ಹಸ್ತಾಂತರ ಮಾಡುವ ಮೂಲಕ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.
ಕಳೆದ ಫೆಬ್ರವರಿ 7 ರಂದು ಬೆಳಗಾವಿಯ ಸದಾಶಿವ ನಗರದಲ್ಲಿ ಹೈಟೆಕ್ ವೇಶಾವಾಟಿಕೆ ಮೇಲೆ ಬೆಳಗಾವಿ ಎಪಿಎಂಸಿ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಇಬ್ಬರು ಯುವತಿಯರನ್ನು ರಕ್ಷಿಸಿ, ಕೆಲವರನ್ನು ಬಂಧಿಸಲಾಗಿತ್ತು.
ಯುವತಿಯರ ಬಗ್ಗೆ ವಿಚಾರಿಸಿದಾಗ ಓರ್ವ ಯುವತಿ ಉತ್ತರ ಪ್ರದೇಶ ಮೂಲದವಳೆಂದು ತಿಳಿದುಬಂದಿದೆ. 2017ರಲ್ಲಿ ಉತ್ತರ ಪ್ರದೇಶದಲ್ಲಿ ಯುವತಿ ಕಾಣೆಯಾಗಿದ್ದಳು. ಗಾಜಿಯಾಬಾದ್ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು.
ಓರ್ವ ಯುವಕನನ್ನು ಪ್ರೀತಿಸಿ, ಆತನಿಂದ ಮೋಸ ಹೋಗಿದ್ದ ಯುವತಿ, ವಾಪಸ್ ಮನೆಗೂ ಹೋಗದೇ, ದಿಕ್ಕು ತೋಚದೇ ಇಲ್ಲಿಯವರೆಗೂ ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ್ದಳು.
ಫೆ.7ರಂದು ನಡೆದ ದಾಳಿಯಲ್ಲಿ ಯುವತಿಯರನ್ನು ರಕ್ಷಣೆ ಮಾಡಿದ ಎಪಿಎಂಸಿ ಪೊಲೀಸರು ಕುಟುಂಬದ ಸದಸ್ಯರ ವಿಳಾಸ ಪತ್ತೆಹಚ್ಚಿ ಯುವತಿಯರನ್ನು ಸ್ವಂತ ಊರಿಗೆ ಕಳುಹಿಸಿ ಮಾನವೀಯತೆಯ ಮೆರೆದಿದ್ದಾರೆ. (ದಿಗ್ವಿಜಯ ನ್ಯೂಸ್)