ಜಿಲ್ಲೆ

'ಎಣ್ಣೆ' ಮತ್ತಲ್ಲಿ ಬಂದ ಅಣ್ಣನಿಗೆ ಬಿಯರ್​ ಬಾಟಲಿಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ತಂಗಿ!

arunakunigal

ಹುಬ್ಬಳ್ಳಿ: ಹೊಟ್ಟೆಗೆ 'ಎಣ್ಣೆ' ಇಳಿಸಿ ಮನೆಯಲ್ಲಿ ಗಲಾಟೆ ಮಾಡುವ ಪುರುಷರೇ ಜೋಕೆ! ನಿಮ್ಮ ಸಹೋದರಿಯ ಸಿಟ್ಟು ನೆತ್ತಿಗೇರಿದ್ರೆ ನಿಮ್ಮ ಕತೆ ಅಷ್ಟೇ... ಹೌದು, ತಾಲೂಕಿನಲ್ಲಿ ಗುರುವಾರ ಸಂಭವಿಸಿದ ಘಟನೆಯೊಂದು ಈ ಮಾತನ್ನು ನೆನಪಿಸುತ್ತದೆ.

ಪ್ರತಿದಿನ ಕುಡಿದು ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಅಣ್ಣನ ವರ್ತನೆಗೆ ಬೇಸತ್ತ ತಂಗಿಯೊಬ್ಬಳು ಗ್ರಾಮದ ನಡುರಸ್ತೆಯಲ್ಲೇ ಅಣ್ಣನ ತಲೆಗೆ ಬಿಯರ್ ಬಾಟಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಅಯ್ಯೋ, ಬಿಟ್ಬುಡೇ ಎಂದು ಆತ ಗೋಗರೆಯುತ್ತ ರಕ್ತದ ಮಡುವಲ್ಲೇ ಬಿದ್ದು  ನರಳಾಡುತ್ತಿದ್ದ. ಇದನ್ನೂ ಓದಿರಿ ಕುಮಾರಸ್ವಾಮಿ ಈಗಲೂ… ಮುಂದೆಯೂ ನನ್ನ ಸ್ನೇಹಿತ ಎಂದ ಡಿಕೆಶಿ

ಇಂತಹ ಘಟನೆ ಹುಬ್ಬಳ್ಳಿಯ ಸುಳ್ಳ ಗ್ರಾಮದ ರಸ್ತೆಯಲ್ಲಿ ಸಂಭವಿಸಿದೆ. ಕುಡಿದ ಅಮಲಿನಲ್ಲಿ ಕಿರುಕುಳ ನೀಡುತ್ತಿದ್ದ ಅಣ್ಣನ ವರ್ತನೆಯನ್ನು ಸಹಿಸಿಕೊಂಡೇ ಇದ್ದ ತಂಗಿಗೆ ಗುರುವಾರ ಬೆಳಗ್ಗೆ ತಾಳ್ಮೆಯ ಕಟ್ಟೆ ಹೊಡೆದಿತ್ತು. ಅವನ ಕೈಯಲ್ಲೇ ಇದ್ದ ಬಿಯರ್​ ಬಾಟಲಿ ಕಿತ್ತುಕೊಂಡ ಆಕೆ ಬುರುಡೆಗೆ ಬೀಸಿದ್ದಾಳೆ. ಅಷ್ಟರಲ್ಲಿ ಸ್ಥಳೀಯರು ಬಂದು ಆಕೆಯನ್ನು ತಡೆದಿದ್ದಾರೆ. ಈ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ವೈರಲ್​ ಆಗಿದೆ.

ಗಂಭೀರ ಗಾಯಗೊಂಡ ಕುಡುಕ ಅಣ್ಣನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇಶ್ವಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.