ಜಿಲ್ಲೆ

ಹಾಲಿನ ವ್ಯಾನಲ್ಲಿ ಗೋಮಾಂಸ ಸಾಗಾಟ: ಪತ್ತೆ ಮಾಡಿದ್ರು ಬಜರಂಗ ದಳದ ಕಾರ್ಯಕರ್ತರು

reportermng

ಮಂಗಳೂರು: ಮಂಗಳವಾರ ಮುಂಜಾನೆ ಆರೋಕ್ಯ ಹಾಲಿನ ವ್ಯಾನ್‌ನಲ್ಲಿ ಗೋಮಾಂಸ ಸಾಗಾಟ ಮಾಡುತ್ತಿರುವುದನ್ನು ಹಿಂದು ಸಂಘಟನೆ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ.

ಪಂಪ್‌ವೆಲ್‌ ಕಡೆಯಲ್ಲಿ ಬರುತ್ತಿದ್ದ ವ್ಯಾನ್ ತಡೆದು ನಿಲ್ಲಿಸಲು ಹೋದಾಗ ನಿಲ್ಲಲ್ಲ. ಹಾಗಾಗಿ ಕಾರ್ಯಕರ್ತರು ಅದನ್ನು ಹಿಂಬಾಲಿಸಿಕೊಂಡು ಬಂದಿದ್ದು ವೆನ್ಲಾಕ್‌ ಆಸ್ಪತ್ರೆ ಬಳಿ ಅಡ್ಡ ಹಾಕಿದ್ದಾರೆ. ಓರ್ವ ಆರೋಪಿಯನ್ನು ಹಿಡಿಯಲಾಗಿದ್ದರೆ ಇನ್ನಿಬ್ಬರು ತಪ್ಪಿಸಿಕೊಂಡಿದ್ದಾರೆ.

ಹಾಲಿನ ಟ್ರೇಗಳ ಎಡೆಯಲ್ಲಿ ಗೋಮಾಂಸವನ್ನು ತುಂಬಿಸಿಕೊಂಡು ಬರಲಾಗುತ್ತಿತ್ತು ಎಂದು ಹಿಂದು ಸಂಘಟನೆ ಕಾರ್ಯಕರ್ತರು ಆರೋಪಿಸಿದ್ದಾರೆ. ವ್ಯಾನ್‌ ಸಹಿತ ಆರೋಪಿಯನ್ನು ಬಂದರು ಪೊಲೀಸ್‌ ಠಾಣೆಗೆ ತರಲಾಗಿದೆ.