More

    ನೌಕರರಿಗೆ ದಸರಾ ಗಿಫ್ಟ್: ಕೇಂದ್ರ ಸಿಬ್ಬಂದಿಗೆ ಎಲ್​ಟಿಸಿ ನಗದು ವೋಚರ್​, 10,000 ರೂಪಾಯಿ ಅಡ್ವಾನ್ಸ್

    36,000 ಕೋಟಿ ರೂಪಾಯಿಯ 2 ವಿಶೇಷ ಯೋಜನೆಯಿಂದ ನಿರೀಕ್ಷಿಸಿರುವ ಗ್ರಾಹಕರ ಬೇಡಿಕೆ
    12,000 ಕೋಟಿ ರೂಪಾಯಿ ರಾಜ್ಯಗಳಿಗೆ ಬಡ್ಡಿ ರಹಿತವಾಗಿ 50 ವರ್ಷ ಅವಧಿಯ ಸಾಲ 
    25,000 ಕೋಟಿ ರೂಪಾಯಿ ಮೂಲ ಸೌಕರ್ಯ ಯೋಜನೆಗಳ ಬಂಡವಾಳ ವೆಚ್ಚಕ್ಕಾಗಿ ನೀಡಿದ ಹೆಚ್ಚುವರಿ ಅನುದಾನ
    73,000 ಕೋಟಿ ರೂಪಾಯಿ ಕೇಂದ್ರ ಒಟ್ಟಾರೆ ಅಂದಾಜಿಸಿರುವ ಗ್ರಾಹಕರ ಬೇಡಿಕೆ 

    ನವದೆಹಲಿ: ಕರೊನಾ ಕಾರಣಕ್ಕೆ ಕುಸಿದಿರುವ ಆರ್ಥಿಕತೆಯಲ್ಲಿ ತುಸು ಚಲನೆ ಮತ್ತು ಚೇತರಿಕೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಸೋಮವಾರ ಎರಡು ವಿಶೇಷ ಯೋಜನೆಗಳನ್ನು ಪ್ರಕಟಿಸಿದೆ. ಕೇಂದ್ರ ಸರ್ಕಾರದ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಹಾಗೂ ಉದ್ದಿಮೆಗಳ ಉದ್ಯೋಗಿಗಳಿಗೆ ದಸರಾ ಹಬ್ಬದ ಬಳುವಳಿಯಾಗಿ ಪ್ರವಾಸ ರಜೆ ರಿಯಾಯಿತಿ ಅಥವಾ ಭತ್ಯೆ (ಎಲ್​ಟಿಸಿ) ಸಂಬಂಧಿತ ನಗದು ವೋಚರ್ ಮತ್ತು ಹಬ್ಬದ ಮುಂಗಡವಾಗಿ ಬಡ್ಡಿರಹಿತವಾಗಿ 10 ಸಾವಿರ ರೂ. ನೀಡಲಿದೆ. ಇದನ್ನು ಮುಂದಿನ ವರ್ಷದ ಮಾ.31ರ ಒಳಗೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದಾಗಿದೆ. ಇದರಿಂದ ಗ್ರಾಹಕರ ಖರೀದಿಶಕ್ತಿ ಹೆಚ್ಚುತ್ತದೆ ಮತ್ತು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳವಾಗುತ್ತದೆ ಎಂಬುದು ಕೇಂದ್ರದ ಲೆಕ್ಕಾಚಾರ.

    ಈ ವಿಶೇಷ ಯೋಜನೆಗಳಿಂದ ಗ್ರಾಹಕರ ಬೇಡಿಕೆ (ಖರೀದಿಸುವ ಶಕ್ತಿ) 36 ಸಾವಿರ ಕೋಟಿ ರೂಪಾಯಿ ಹೆಚ್ಚಳವಾಗಲಿದ್ದು, ಕರೊನಾ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಇದನ್ನೂ ಓದಿ: ಗ್ಲಾಸ್​, ಸ್ಮಾರ್ಟ್​ಫೋನ್​ಗಳ ಮೇಲೆ 28 ದಿನ ಜೀವಂತ ಇರುತ್ತೆ ಕರೊನಾ ವೈರಸ್!

    ಸರ್ಕಾರಿ ಮತ್ತು ಸಂಘಟಿತ ವಲಯದ ಕಾರ್ವಿುಕರಲ್ಲಿ ಉಳಿತಾಯ ಹೆಚ್ಚಾಗಿರುವ ಸೂಚನೆ ಇದೆ. ಇಂಥವರು ಖರ್ಚುವೆಚ್ಚ ಮಾಡಿದರೆ ಕರೊನಾ ಕಾರಣ ಕಷ್ಟಕ್ಕೆ ಸಿಲುಕಿರುವವರಿಗೆ ನೆರವಾಗುತ್ತದೆ. ಆದ್ದರಿಂದ ಈ ಉತ್ತೇಜನಕಾರಿ ಕ್ರಮ ಕೈಗೊಳ್ಳಲಾಗಿದೆ.
    | ನಿರ್ಮಲಾ ಸೀತಾರಾಮನ್, ಕೇಂದ್ರ ವಿತ್ತ ಸಚಿವೆ.

    ಎಲ್​ಟಿಸಿ ನಗದು ವೋಚರ್ ನೀಡಿಕೆಯಿಂದ ಸರ್ಕಾರಕ್ಕೆ 5,675 ಕೋಟಿ ರೂಪಾಯಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಮತ್ತು ಉದ್ದಿಮೆಗಳಿಗೆ 1,900 ಕೋಟಿ ರೂಪಾಯಿ ಹೆಚ್ಚುವರಿ ಹೊರೆಬೀಳಲಿದೆ. ಆದರೆ, 28 ಸಾವಿರ ಕೋಟಿ ರೂಪಾಯಿ ಮೊತ್ತದಷ್ಟು ಗ್ರಾಹಕರ ಬೇಡಿಕೆ ಹೆಚ್ಚುವ ನಿರೀಕ್ಷೆ ಇದೆ. ಹಬ್ಬದ ಮುಂಗಡಕ್ಕಾಗಿ 4,000 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಕರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಳ್ಳುವುದು ಕಷ್ಟ ಅಥವಾ ರಿಸ್ಕ್ ಆಗಿರುವ ಕಾರಣ ಪ್ರವಾಸದ ಟಿಕೆಟ್ ಮೊತ್ತವನ್ನು ನಗದು ವೋಚರ್ ಮೂಲಕ ನೀಡಲಾಗುತ್ತದೆ ಎಂದರು.

    ಇದನ್ನೂ ಓದಿ: ವಿಧಾನಪರಿಷತ್ತಿನ 4 ಸ್ಥಾನಗಳಿಗೆ 40 ಮಂದಿ ಅಂತಿಮ ಕಣದಲ್ಲಿ…

    ಕಾರಣಗಳೇನು?
    *ಲಾಕ್​ಡೌನ್ ನಿರ್ಬಂಧದಿಂದಾಗಿ 2020-21ರ ಮೊದಲ ತ್ರೖೆಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ದರ ಮೈನಸ್ ಶೇ. 23.9ರ ಪ್ರಪಾತಕ್ಕೆ ಕುಸಿದಿದೆ
    *ಜಿಡಿಪಿ ಸುಧಾರಿಸಬೇಕಾದರೆ ವ್ಯಾಪಾರ ವಹಿವಾಟು ಹೆಚ್ಚಾಗಬೇಕು
    *ಇದು ಸಾಧ್ಯವಾಗಲು ಜನರ ಬಳಿ ನಗದು ಇರಬೇಕು

    ಇದನ್ನೂ ಓದಿ: ವರ್ಚುವಲ್ ನ್ಯಾಯಾಂಗ ವ್ಯವಸ್ಥೆ ಅನಿವಾರ್ಯ: ಸಜ್ಜನ್ ಪೂವಯ್ಯ ಅವರ ಲಾ & ಆರ್ಡರ್ ಅಂಕಣ

    ಎಲ್​ಟಿಸಿ ವೋಚರ್​ಗೆ ಕರಾರು
    ಎಲ್​ಟಿಸಿ ನಗದು ವೋಚರ್ ಯೋಜನೆಯಲ್ಲಿ ಕೇಂದ್ರದ ನೌಕರರು ರಜೆಯನ್ನು ನಗದಾಗಿ ಪರಿವರ್ತಿಸಿಕೊಳ್ಳಬಹುದು ಮತ್ತು ಪ್ರವಾಸದ ಟಿಕೆಟ್​ನ ಮೂರು ಪಟ್ಟು ಮೊತ್ತ ಪಡೆಯಬಹುದು. ಈ ಮೊತ್ತವನ್ನು ಕನಿಷ್ಠ 12ರಷ್ಟು ಜಿಎಸ್​ಟಿ ಆಕರಿಸುವ ಆಹಾರೇತರ ವಸ್ತುಗಳ ಖರೀದಿಗೆ ಬಳಸಬೇಕು ಮತ್ತು ಇದನ್ನು ಜಿಎಸ್​ಟಿ ನೋಂದಾಯಿತ ಮಳಿಗೆಯಲ್ಲೇ ಖರೀದಿಸಿ ಡಿಜಿಟಲ್ ಮೂಲಕವೇ ಪಾವತಿಸಬೇಕು ಎಂಬ ಕರಾರು ವಿಧಿಸಲಾಗಿದೆ.

    ಇದನ್ನೂ ಓದಿ: ಕಠಿಣವಾದರೂ ಪರಿಶೀಲನೀಯ, ಪಾಲನೀಯ ಪರಿಹಾರ: ಡಾ.ಕೆ.ಎಸ್.ನಾರಾಯಣಾಚಾರ್ಯ ಅವರ ರಾಜಧರ್ಮರಾಜನೀತಿ ಅಂಕಣ

    ಬಡ್ಡಿರಹಿತ ಮುಂಗಡ
    ಬಡ್ಡಿ ರಹಿತ ಮುಂಗಡ 10 ಸಾವಿರ ರೂಪಾಯಿಯನ್ನು ರುಪೇ ಡಿಬಿಟ್ ಕಾರ್ಡ್ ಮೂಲಕ ಒಮ್ಮೆ ನೀಡಲಾಗುತ್ತದೆ. ವೇತನದಲ್ಲಿ 10 ಕಂತು ಕಡಿತ ಮಾಡಲಾಗುತ್ತದೆ. ನೌಕರರು ಮಾ.31ರೊಳಗೆ ಈ ಅವಕಾಶ ಪಡೆದುಕೊಳ್ಳಬಹುದಾಗಿದೆ. ಹಬ್ಬದ ಸಂದರ್ಭದಲ್ಲಿ ನೌಕರರಿಗೆ ಮುಂಗಡ ನೀಡುವ ಯೋಜನೆ ಇತ್ತು. 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ರದ್ದುಮಾಡಲಾಗಿತ್ತು. ಇದೀಗ ಮರುಚಾಲನೆ ಸಿಕ್ಕಿದೆ.

    ಇದನ್ನೂ ಓದಿ: ಶಾಲೆಗಳನ್ನು ಮುಚ್ಚಿದ್ದರಿಂದ 29.34 ಲಕ್ಷ ಕೋಟಿ ರೂ. ನಷ್ಟ!

    ರಾಜ್ಯಗಳು ನೀಡಬಹುದು
    ಈ ವಿಶೇಷ ಯೋಜನೆಗಳನ್ನು ರಾಜ್ಯಗಳೂ ತಮ್ಮ ನೌಕರರಿಗೆ ವಿಸ್ತರಿಸಬಹುದು. ಇದರಿಂದ ಅವುಗಳಿಗೆ 9 ಸಾವಿರ ಕೋಟಿ ರೂಪಾಯಿಯಷ್ಟು ಹೊರೆಯಾಗಲಿದೆ. ರಾಜ್ಯ ಸರ್ಕಾರಗಳೂ ಹಬ್ಬದ ಮುಂಗಡ ನೀಡಿದರೆ 8 ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ. ಇದರಿಂದ 8 ಸಾವಿರ ಕೋಟಿ ರೂಪಾಯಿಯಷ್ಟು ಗ್ರಾಹಕರ ಬೇಡಿಕೆಯೂ ಹೆಚ್ಚುತ್ತದೆ ಎಂದು ಸಚಿವೆ ನಿರ್ಮಲಾ ತಿಳಿಸಿದರು. ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳು ಈ ಯೋಜನೆಯನ್ನು ವಿಸ್ತರಿಸಿದರೆ ಗ್ರಾಹಕರ ಬೇಡಿಕೆ 1 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗುತ್ತದೆ. ಇಷ್ಟಾದರೂ ಜನರಲ್ಲಿ ಖರೀದಿ ಸಾಮರ್ಥ್ಯ ಲಾಕ್​ಡೌನ್​ಪೂರ್ವದಷ್ಟು ಚೇತರಿಕೆ ಕಾಣುವುದಿಲ್ಲ ಎಂದರು.

    ಇದನ್ನೂ ಓದಿ: Web Exclusive| ‘ಭಾನುವಾರ ಮಾರುಕಟ್ಟೆ’ ನನೆಗುದಿಗೆ

    ನೌಕರನಿಗೆ ಎಷ್ಟು ಪ್ರಯೋಜನಕಾರಿ?
    *ಎಲ್​ಟಿಸಿ ವೋಚರ್ 40 ಸಾವಿರ ರೂಪಾಯಿ ಮೊತ್ತದ್ದಾಗಿದ್ದರೆ ಇದಕ್ಕೆ ಆಕರವಾಗುವ ತೆರಿಗೆ ತಪ್ಪಿಸಲು 1.20 ಲಕ್ಷ ರೂಪಾಯಿ ಮೊತ್ತದ ಖರೀದಿ ಮಾಡಬೇಕು. ಇಂಥ ಪರಿಕರಗಳಿಗೆ ಕನಿಷ್ಠ ಶೇ.12ರಷ್ಟು ಜಿಎಸ್​ಟಿ ಇರಬೇಕು
    *ನೌಕರ ಎಲ್​ಟಿಸಿ ವೋಚರ್ ಹಣ ಪಡೆದುಕೊಂಡೂ ಅದನ್ನು ಖರೀದಿಗೆ ವಿನಿಯೋಗಿಸದಿದ್ದರೆ ಅದಕ್ಕೆ ತೆರಿಗೆ ಪಾವತಿಸಬೇಕು. ಈ ತೆರಿಗೆ ನೌಕರನ ಆದಾಯ ತೆರಿಗೆ ಯಾವ ಶ್ರೇಣಿಯಲ್ಲಿ ಇರುತ್ತದೋ ಅದಕ್ಕೆ ಅನುಸಾರವಾಗಿರುತ್ತದೆ. ಉದಾಹರಣೆಗೆ 40 ಸಾವಿರ ರೂಪಾಯಿ ಎಲ್​ಟಿಎ ವೋಚರ್ ಪಡೆದುಕೊಂಡವನ ಆದಾಯ ತೆರಿಗೆ ಶ್ರೇಣಿ ಶೇ.10ರಲ್ಲಿದ್ದರೆ 4 ಸಾವಿರ ರೂಪಾಯಿ ತೆರಿಗೆ ಪಾವತಿಸಬೇಕು
    *ಪ್ರವಾಸದ ರಜೆ ನಗದೀಕರಣಕ್ಕೆ ಪಡೆದ ಮೊತ್ತವನ್ನು ಕನಿಷ್ಠ ಶೇ. 12ರ ಜಿಎಸ್​ಟಿ ಇರುವ ಪರಿಕರಗಳ ಖರೀದಿಗೆ ವಿನಿಯೋಗಿಸಬೇಕು.

    ಇದನ್ನೂ ಓದಿ: ಸರ್ಕಾರಿ ಸಂಪನ್ಮೂಲ ದುರುಪಯೋಗದ ಆರೋಪ: ಇಮ್ರಾನ್ ಖಾನ್​ಗೆ​ ಸುಪ್ರೀಂ ನೋಟಿಸ್ !

    ಕರ ಸಂಗ್ರಹಣೆಗೆ ಎಷ್ಟು ಲಾಭ?
    *ಈ ಯೋಜನೆಯ ಫಲಾನುಭವಿಗಳು ಖರೀದಿ ಮಾಡುವುದರಿಂದ ಜಿಎಸ್​ಟಿ ಸಂಗ್ರಹದಲ್ಲಿ ಏರಿಕೆ ಆಗುತ್ತದೆ
    *2020-21ರ ಪೂರ್ವಾರ್ಧದಲ್ಲಿ ಲಾಕ್​ಡೌನ್ ಕಾರಣ ಜಿಎಸ್​ಟಿ ಸಂಗ್ರಹ ಕುಸಿದಿದೆ. ಇದನ್ನು ತುಸು ಮಟ್ಟಿಗೆ ಸರಿದೂಗಿಸಲು ಉತ್ತರಾರ್ಧದಲ್ಲಿ ಜಿಎಸ್​ಟಿ ಆಕರವನ್ನು ಹೆಚ್ಚಿಸಬೇಕಿದೆ. ಹೀಗಾಗಿ ಸರ್ಕಾರ ಈ ವಿಶೇಷ ಯೋಜನೆಗಳಿಗೆ ಮಾ.31ರ ಕರಾರು ಹಾಕಿದೆ.
    * ಕೇಂದ್ರ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಮತ್ತು ಉದ್ದಿಮೆಗಳ ಜತೆಗೆ ರಾಜ್ಯ ಸರ್ಕಾರಗಳು ಹಾಗೂ ಖಾಸಗಿ ವಲಯ ಈ ಯೋಜನೆ ವಿಸ್ತರಿಸಿದರೆ ಜಿಎಎಸ್​ಟಿ ಸಂಗ್ರಹದಲ್ಲಿ ಇನ್ನಷ್ಟು ಏರಿಕೆ ಸಾಧ್ಯ ಎಂಬುದು ಕೇಂದ್ರದ ಚಿಂತನೆ.
    *ರಾಜ್ಯಗಳಿಗೆ 12 ಸಾವಿರ ಕೋಟಿ ರೂಪಾಯಿ ಸಾಲದ ಬಳಕೆಗೂ ಮಾ.31ರ ಗಡುವನ್ನು ಕೇಂದ್ರ ವಿಧಿಸಿದೆ. ಅಂದರೆ ಗುತ್ತಿಗೆದಾರರಿಗೆ ಹಣಕಾಸು ವರ್ಷದ ಅಂತ್ಯಕ್ಕೆ ಲೆಕ್ಕ ಚುಕ್ತಾ ಮಾಡಿರಬೇಕು. ಇದರಿಂದ ಗುತ್ತಿಗೆದಾರರು ಕಾಮಗಾರಿಗೆ ಖರೀದಿಸುವ ಪರಿಕರ, ಬಳಸುವ ಸೇವೆಗೆ ತೆರಿಗೆ ಕಟ್ಟುತ್ತಾರೆ. ಜತೆಗೆ ತಮ್ಮ ಆದಾಯಕ್ಕೂ ಕರ ಪಾವತಿಸಬೇಕು, ಇದರಿಂದಲೂ ತೆರಿಗೆ ಸಂಗ್ರಹ ಹೆಚ್ಚುತ್ತದೆ.
    * ಮೂಲಸೌಕರ್ಯ ಯೋಜನೆಗಳ ಬಂಡವಾಳ ವೆಚ್ಚಕ್ಕಾಗಿ 25 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿಕೆಯಿಂದಲೂ ಆರ್ಥಿಕ ಚಟುವಟಿಕೆ ವೃದ್ಧಿಸುತ್ತದೆ. ಸಾರ್ವಜನಿಕರಿಗೆ ಅನುಕೂಲ ಮತ್ತು ಖರೀದಿಯಿಂದ ಕೇಂದ್ರಕ್ಕೆ ತೆರಿಗೆ ಹರಿದುಬರುತ್ತದೆ.

    ಇನ್ನು ಒಬ್ಬರ ಮೈ ಮುಟ್ಟಿದ್ರೆ ನಿಮ್ಮಲ್ಲಿ ನಾಲ್ವರು ಮೈ ಮುಟ್ಟಿಕೊಳ್ಳಬೇಕಾದೀತು- ಟಿಎಂಸಿಗೆ ಬಿಜೆಪಿ ಕಡಕ್ ವಾರ್ನಿಂಗ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts