ಬಂಟ್ವಾಳ: ಹೋಂಡಾ ಕಂಪನಿ ಲಾಂಚ್ ಮಾಡಿದ ನೂತನ 125 ಸಿಸಿಯ ಎಸ್‌ಪಿ 125, ಆಕ್ಟಿವಾ 125ನ ಜತೆಗೆ ಆಕ್ಟಿವಾ, ಡಿಯೊ ಹಾಗೂ ಯೂನಿಕಾರ್ನ್ ದ್ವಿಚಕ್ರ ವಾಹನಗಳನ್ನು ಬಿ.ಸಿ.ರೋಡ್ ಶಾಂತಿಯಂಗಡಿಯಲ್ಲಿರುವ ಕಾಂಚನಾ ಹೋಂಡಾ ಶೋರೂಮ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಜತೆಗೆ ಶೋರೂಮ್‌ನ ದಶಮಾನೋತ್ಸವ ಆಚರಿಸಲಾಯಿತು.
ದ.ಕ. ಎಸ್.ಪಿ. ಯತೀಶ್ ಎನ್. ನೂತನ ದ್ವಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಿ ಗ್ರಾಹಕರಿಗೆ ಕೀ ಹಸ್ತಾಂತರಿಸಿದರು. ಅಪಘಾತದ ಸಂದರ್ಭ ಗಾಯಾಳುಗಳ ತ್ವರಿತ ಚಿಕಿತ್ಸೆಗೆ ಸಹಕರಿಸಿದ ಆದಂ ಅವರನ್ನು ಗೌರವಿಸಲಾಯಿತು. ಕಾಂಚನಾ ಹೋಂಡಾ ಜನರಲ್ ಮ್ಯಾನೇಜರ್ ಪ್ರತೀಕ್ ಕಾಮತ್, ಎಜಿಎಂ ಸೇಲ್ಸ್ ಹಾಶಿರ್, ಮಾರ್ಕೆಟಿಂಗ್ ಮ್ಯಾನೇಜರ್ ಸುಶಾಂತ್ ಶೆಟ್ಟಿ, ಸೇಲ್ಸ್ ಮ್ಯಾನೇಜರ್ ಶ್ವೇತಾ, ಸರ್ವೀಸ್ ಮ್ಯಾನೇಜರ್ ಸುಧೀರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಯೂಟ್ಯೂಬರ್ ಅರ್ಪಿತ್ ಕಾರ್ಯಕ್ರಮ ನಿರ್ವಹಿಸಿದರು.