ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ಸ್ಥಳೀಯ ಆಡಳಿತ ಸಂಸ್ಥೆಯಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ವಾರ್ಡ್ಗಳನ್ನು 225ಕ್ಕೆ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಕರ್ನಾಟಕ ಹೈಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ಡಿಲಿಮಿಟೇಷನ್ ಸಮಿತಿ ಒಂದನ್ನು ರಚಿಸಿತ್ತು.
225ರಿಂದ 250 ವಾರ್ಡ್ಗಳನ್ನು ರಚಿಸುವ ಪರಮಾಧಿಕಾರ ಹೊಂದಿದೆ. 2011ರ ಜನಸಂಖ್ಯೆ ಆಧಾರದ ಮೇರೆಗೆ 243 ವಾರ್ಡ್ ನಿಗದಿಪಡಿಸುವುದು ಸೂಕ್ತ ಎಂದು ಡಿಲಿಮಿಟೇಷನ್ ಸಮಿತಿ ವರದಿ ನೀಡಿತ್ತು. ಸಮಿತಿ ನೀಡಿದ ವರದಿ ಬಳಿಕ ಸರ್ಕಾರ 243 ವಾರ್ಡ್ಗಳನ್ನು 225ಕ್ಕೆ ಇಳಿಸಿ ಆದೇಶ ಹೊರಡಿಸಿದೆ.
2020 ಸೆಪ್ಟೆಂಬರ್ ತಿಂಗಳಲ್ಲಿ ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿ ಮುಗಿದಿದ್ದು, ಚುನಾವಣೆ ನಡೆಸುವ ದೃಷ್ಟಿಯಿಂದ 198 ವಾರ್ಡ್ಗಳನ್ನು ಪುನರ್ ವಿಂಗಡಣೆ ಮಾಡಲಾಗಿತ್ತು. ಹಿಂದೆ ಇದ್ದ ಬಿಜೆಪಿ ಸರ್ಕಾರ ಬಿಬಿಎಂಪಿ ವ್ಯಾಪ್ತಿಯನ್ನು 243 ವಾರ್ಡ್ಗಳಿಗೆ ಹೆಚ್ಚಿಸಿತ್ತು. ಬಿಜೆಪಿ ಸರ್ಕಾರ ಮಾಡಿಸಿರುವ ವಾರ್ಡ್ ಮರುವಿಂಗಡಣೆ ಸೂಕ್ತವಾಗಿಲ್ಲ ಎಂದು ಆರೋಪಿಸಿ ಮಾಜಿ ಸದಸ್ಯರು ಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ: ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡಿದ್ದ ಕವಾಡಿಗರಹಟ್ಟಿಯ ಮಹಿಳೆಗೆ ಗರ್ಭಪಾತ; ಮೃತರ ಸಂಖ್ಯೆ ಆರಕ್ಕೆ ಏರಿಕೆ