ಜಿಲ್ಲೆ

ಪೊಲೀಸರ ಕೈಗೆ ಸಿಕ್ಕಿಬಿದ್ದ ಬಿಬಿಎಂಪಿ ಹಿರಿಯ ಆರೋಗ್ಯ ಅಧಿಕಾರಿ!

arunakunigal

ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಿರಿಯ ಆರೋಗ್ಯ ಅಧಿಕಾರಿ ವಿ.ಆರ್. ಪ್ರವೀಣ್ ಕುಮಾರ್​ರನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.

ದಾಸಹಳ್ಳಿ ವಲಯದ ಹಿರಿಯ ಆರೋಗ್ಯ ಅಧಿಕಾರಿ ಆಗಿರುವ ಪ್ರವೀಣ್ ಕುಮಾರ್, ನಿಸರ್ಗ ನಿಧಿ ಎಣ್ಣೆ ಗಿರಣಿ ಮಾಲೀಕನಿಂದ ಲಂಚ ಪಡೆಯುವಾಗ ರೆಡ್​ಹ್ಯಾಂಡ್​ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಎಣ್ಣೆ ಗಿರಣಿ ತರೆಯಲು ದಾಸಹಳ್ಳಿ ವಲಯದ ಬಿಬಿಎಂಪಿ ಕಚೇರಿಯಲ್ಲಿ ವ್ಯಕ್ತಿಯೊಬ್ಬರು ಅರ್ಜಿ ಹಾಕಿದ್ದರು. ಈ ವೇಳೆ ಕೆಲಸ ಮಾಡಿಕೊಡಲು ಹೆಚ್ಚು ಸಮಯ ಆಗುತ್ತೆ, ಶೀಘ್ರವಾಗಿ ಕೆಲಸ ಆಗಬೇಕು ಎಂದರೆ ಲಂಚ ನೀಡುವಂತೆ ಕೇಳಿದ್ದ ಪ್ರವೀಣ್ ಕುಮಾರ್ ಬೇಡಿಕೆ ಇಟ್ಟಿದ್ದರು. ಅದರಂತೆ ಒಮ್ಮೆ 3 ಸಾವಿರ ಹಣ ಪಡೆದಿದ್ದ ಅಧಿಕಾರಿಯು, ಒಟ್ಟು 12 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಅದರಂತೆ ಅವರು ಉಳಿದ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.