ಬೆಂಗಳೂರು: ಇಷ್ಟು ದಿನ ಕರೊನಾ ಸೋಂಕಿತ ರೋಗಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಫಂಗಸ್ ಇದೇ ಕೋವಿಡ್ ಕೇರ್ ಸೆಂಟರ್ನ ಚಪಾತಿಯಲ್ಲಿ ಕಾಣಿಸಿಕೊಂಡಿದೆ! ಈ ಫಂಗಸ್ ನೋಡಿ ಸಿಲಿಕಾನ್ ಸಿಟಿಯ ಸೋಂಕಿತರು ಬೆಸ್ತುಬಿದ್ದಿದ್ದಾರೆ.
ಈಗಾಗಲೇ ಕರೊನಾ ರೋಗಿಗಳನ್ನು ಹಿಂಡಿ ಹಿಪ್ಪೆ ಮಾಡಿರುವ ಫಂಗಸ್ಗಳ ನಡುವೆ ಈ ಫಂಗಸ್ ಪತ್ತೆಯಾಗಿರುವುದು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಕರೊನಾ ರೋಗಿಗಳಿಗೆ ನೀಡುವ ಊಟದ ರೂಪದಲ್ಲಿ ಹೊಸ ಫಂಗಸ್ ಕಂಡುಬಂದಿದೆ. ಅದು ಬೇರೆ ಯಾವುದೂ ಅಲ್ಲ, ಅದೇ ಚಪಾತಿ ಫಂಗಸ್.
ಹೊಸ ಫಂಗಸ್ ಕಂಡು ಕೋವಿಡ್ ಸೆಂಟರ್ನಲ್ಲಿ ಇರುವ ಕರೊನಾ ರೋಗಿಗಳು ಶಾಕ್ ಆಗಿದ್ದಾರೆ. ಬಿಬಿಎಂಪಿ ಬೇಜವಾಬ್ದಾರಿತನದಿಂದ ಕರೊನಾ ರೋಗಿಗಳು ಗೊಂದಲಕ್ಕೀಡಾಗಿದ್ದಾರೆ. ಈ ಚಪಾತಿ ಫಂಗಸ್ ಊಟವನ್ನು ಸೇವಿಸ ಬೇಕಾ ಅಥವಾ ಬೇಡವ ಎನ್ನುವ ಗೊಂದಲದಲ್ಲಿ ಸೋಂಕಿತರಿದ್ದಾರೆ.
ಈಗಲಾದರು ಬಿಬಿಎಂಪಿ ಕರೊನಾ ರೋಗಿಗಳು ವಿಚಾರದಲ್ಲಿ ಎಚ್ಚರಿಕೆ ವಹಿಸಿದರೆ ಒಳ್ಳೆಯದು. ಕೋರಮಂಗಲದ ಕೋವಿಡ್ ಕೇರ್ ಸೆಂಟರ್ ನಲ್ಲಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಸೋಂಕಿತರಿಗೆ ನೀಡಿದ್ದ ಊಟದಲ್ಲಿ ಫಂಗಸ್ ಪತ್ತೆಯಾಗಿದೆ. (ಏಜೆನ್ಸೀಸ್)