More

    ಚೀನಾ ಕಂಪೆನಿಯಿಂದ ಮೀನು ಆಮದು ನಿಲ್ಲಿಸಿದ ಅಮೆರಿಕ

    ವಾಷಿಂಗ್ಟನ್​​ : ಚೀನಾದಲ್ಲಿ ಕರೊನಾ ವೈರಸ್​ ಹುಟ್ಟಿದ ಬಗ್ಗೆ ಹೆಚ್ಚು ತನಿಖೆಯಾಗಬೇಕು ಎಂದು ಆಗ್ರಹಿಸುತ್ತಿರುವ ಜೊತೆಗೇ ಚೀನಾದ ಮೀನುಗಾರಿಕೆ ಕಂಪೆನಿಯೊಂದರ 30 ಕ್ಕೂ ಹೆಚ್ಚು ಹಡಗುಗಳಿಂದ ಬರುವ ಸೀಫುಡ್​ ಆಮದನ್ನು ಅಮೆರಿಕ ಸರ್ಕಾರ ಏಕಾಏಕಿ ನಿರ್ಬಂಧಿಸಿದೆ. ಈ ನೌಕೆಗಳಲ್ಲಿ ಸಿಬ್ಬಂದಿಯನ್ನು ಗುಲಾಮರಂತೆ ಬಲವಂತವಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂದು ಅಮೆರಿಕ ಅಧಿಕಾರಿಗಳು ಆರೋಪಿಸಿದ್ದಾರೆ.

    ಅಮೆರಿಕದ ಕಸ್ಟಮ್ಸ್​ ಅಂಡ್​ ಬಾರ್ಡರ್ ಪ್ರೊಟೆಕ್ಷನ್ (ಸಿಬಿಪಿ) ಇಲಾಖೆಯು ಚೀನಾದ ಡಾಲಿಯನ್ ಓಷನ್ ಫಿಶಿಂಗ್​ನ ನೌಕೆಗಳಿಂದ ಬರುವ ಸೀಫುಡ್​ ಆಮದಿನ ಮೇಲೆ ತಕ್ಷಣವೇ ತಡೆ ವಿಧಿಸಿದೆ. ಬಲವಂತದ ದುಡಿಮೆಯೊಂದಿಗೆ ಉತ್ಪಾದಿಸಲಾಗಿದೆಯೆಂದು ಶಂಕಿಸಲಾಗಿರುವ ಸರಕುಗಳನ್ನು ನಿಷೇಧಿಸುವ ಅಮೆರಿಕದ ಕಾನೂನಿನಡಿ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ವರ್ಷ ಈ ಕಂಪೆನಿಯ ನೌಕೆಗಳಲ್ಲಿ ಕೆಲಸ ಮಾಡುತ್ತಿದ್ದ ಇಂಡೋನೇಷ್ಯಾದ ಹಲವಾರು ಮೀನುಗಾರರ ಸಾವು ಸಂಭವಿಸಿತ್ತು ಎನ್ನಲಾಗಿದೆ.

    ಇದನ್ನೂ ಓದಿ: ಭಾರಿ ಮಳೆಗೆ ಪಂಪ್ವೆಲ್ ಜಂಕ್ಷನ್ ಜಲಾವೃತ !

    ಹೆಚ್ಚಾಗಿ ಉನ್ನತ ಮಟ್ಟದ ಟೂನಾ ಮೀನಿನ ಆಮದನ್ನು ಒಳಗೊಂಡ ಡಾಲಿಯನ್​ ಕಂಪನಿಯೊಂದಿಗಿನ​ ಅಮೆರಿಕ ವಹಿವಾಟು 2018 ರಲ್ಲಿ 20 ಮಿಲಿಯನ್ ಡಾಲರ್​ಗಳನ್ನು ಮೀರಿತ್ತು. ಈ ಕಂಪೆನಿಯು 2019 ರಲ್ಲಿ 1.8 ಮಿಲಿಯನ್ ಡಾಲರ್​​ಗಳಷ್ಟು ಸರಕನ್ನು, 2020ರಲ್ಲಿ 321,000 ಡಾಲರ್​ ಸರಕನ್ನು, ಮತ್ತು ಈ ವರ್ಷ ಏಪ್ರಿಲ್ 30 ರವರೆಗೆ 763,000 ಡಾಲರ್​ ಸರಕನ್ನು ಅಮೆರಿಕಕ್ಕೆ ಕಳುಹಿಸಿತ್ತು ಎನ್ನಲಾಗಿದೆ.

    ಆದರೆ ಇದೀಗ ಅಮೆರಿಕದ ಸಿಬಿಪಿ, ಡಾಲಿಯನ್​ ಮೀನುಗಾರಿಕೆ ಕಾರ್ಯದಲ್ಲಿ ಕಾರ್ಮಿಕರ ಶೋಷಣೆ ನಡೆಯುತ್ತಿದೆ ಎಂಬ ಕಾರಣವೊಡ್ಡಿ ಆಮದು ನಿಲ್ಲಿಸುತ್ತಿದೆ. ಕೂಲಿ ಹಣವನ್ನು ತಡೆಹಿಡಿಯುವುದು ಮತ್ತು ಶಾರೀರಿಕವಾಗಿ ಬೆದರಿಕೆ ಒಡ್ಡುವುದೂ ಸೇರಿದಂತೆ ಅಮಾನವೀಯ ಪರಿಸ್ಥಿತಿಗಳಲ್ಲಿ ವಿದೇಶೀಯ ನೌಕರರನ್ನು ಚೀನಾದ ಈ ಕಂಪೆನಿ ದುಡಿಸಿಕೊಳ್ಳುತ್ತಿದೆ ಎಂಬುದಕ್ಕೆ ಪುರಾವೆಗಳು ಲಭಿಸಿವೆ ಎಂದು ಆಫೀಸ್​ ಆಫ್​ ಟ್ರೇಡ್​ನ ಅಧಿಕಾರಿ ಜಾನ್ ಲಿಯೊನಾರ್ಡ್​ ಹೇಳಿದ್ದಾರೆ. (ಏಜೆನ್ಸೀಸ್)

    6 ವಾರಗಳ ನಂತರ ಇಳಿದ ಸೋಂಕು ಸಂಖ್ಯೆ ; 1.73 ಲಕ್ಷ ಹೊಸ ಪ್ರಕರಣ

    ಚಿನ್ನ-ಬೆಳ್ಳಿ ವ್ಯಾಪಾರ : ಹಾಲ್​ಮಾರ್ಕ್​ ಇಲ್ಲದಿದ್ದರೆ ಬೀಳುತ್ತೆ ಕ್ರಿಮಿನಲ್​ ಕೇಸ್​!

    ‘ಫ್ರೆಂಡ್ಸ್​’ ಪುನರ್ಮಿಲನ ! 17 ವರ್ಷಗಳ ನಂತರ ಅದೇ ಸೆಟ್​ನಲ್ಲಿ ತಾರೆಗಳು !

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts