More

    6 ವಾರಗಳ ನಂತರ ಇಳಿದ ಸೋಂಕು ಸಂಖ್ಯೆ ; 1.73 ಲಕ್ಷ ಹೊಸ ಪ್ರಕರಣ

    ನವದೆಹಲಿ : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಸುಮಾರು 1.73 ಲಕ್ಷ ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, ಆರು ವಾರಗಳ ನಂತರ ಇಷ್ಟು ಕಡಿಮೆ ಪ್ರಕರಣ ದಾಖಲಾಗಿವೆ. ಮತ್ತೊಂದೆಡೆ 30,62,747 ಡೋಸ್​ಗಳಷ್ಟು ಕರೊನಾ ಲಸಿಕೆ ನೀಡಲಾಗಿದ್ದು, ದೇಶದ 20.89 ಕೋಟಿ ಜನರು ಲಸಿಕೆ ಪಡೆದಿದ್ದಾರೆ.

    ಏಪ್ರಿಲ್ 12 ರಂದು ದೇಶದಲ್ಲಿ 1.61 ಲಕ್ಷ ಹೊಸ ಪ್ರಕರಣಗಳು ವರದಿಯಾಗಿದ್ದವು. ತದನಂತರ ನಿತ್ಯಪ್ರಕರಣಗಳ ಸಂಖ್ಯೆ ಮೇಲ್ಮುಖವಾಗಿ ಏರುತ್ತಲೇ ಇತ್ತು. ಇಂದು ಮತ್ತೆ 1.73 ಲಕ್ಷ ನಿತ್ಯಪ್ರಕರಣ ವರದಿಯಾಗಿದ್ದು, 45 ದಿನಗಳ ನಂತರ ಭಾರೀ ಇಳಿಕೆ ಕಂಡಿದೆ. ಈವರೆಗೆ ದೇಶದಲ್ಲಿ ಒಟ್ಟು 2.77 ಕೋಟಿ ಕರೊನಾ ಪ್ರಕರಣಗಳು ಕಂಡುಬಂದಿವೆ.

    ಇದನ್ನೂ ಓದಿ: ಹಗಲಲ್ಲೇ ಕಾರು ಅಡ್ಡಗಟ್ಟಿ ವೈದ್ಯ ದಂಪತಿಯ ಹತ್ಯೆ: 2 ವರ್ಷಗಳ ಹಿಂದಿನ ಅಕ್ರಮ ಸಂಬಂಧದ ಸೇಡು?!​

    ಕಳೆದ 24 ಗಂಟೆಗಳಲ್ಲಿ 3,617 ಕರೊನಾ ಸೋಂಕಿತರು ಸಾವಪ್ಪಿದ್ದು, ಈವರೆಗಿನ ಮರಣ ಸಂಖ್ಯೆ 3,22,512 ತಲುಪಿದೆ. ಮತ್ತೊಂದೆಡೆ 2,84,601 ರೋಗಿಗಳು ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 22.28 ಲಕ್ಷದಷ್ಟಿದೆ. ಅತಿ ಹೆಚ್ಚು ಸಾವುಗಳು ಮಹಾರಾಷ್ಟ್ರದಲ್ಲಿ (973) ಮತ್ತು ತಮಿಳುನಾಡಿನಲ್ಲಿ(486) ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

    ಗರಿಷ್ಠ ಸಂಖ್ಯೆಯಲ್ಲಿ ಪ್ರಕರಣಗಳನ್ನು ದಾಖಲಿಸಿರುವ ರಾಜ್ಯಗಳಲ್ಲಿ ತಮಿಳುನಾಡು ಮೊದಲನೇ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕಳೆದ 24 ಗಂಟೆಗಳಲ್ಲಿ ತಮಿಳುನಾಡಿನಲ್ಲಿ 31,079 ಪ್ರಕರಣಗಳು, ಕರ್ನಾಟಕದಲ್ಲಿ 22,823 ಪ್ರಕರಣಗಳು, ಕೇರಳದಲ್ಲಿ 22,318, ಮಹಾರಾಷ್ಟ್ರದಲ್ಲಿ 20,740 ಮತ್ತು ಆಂಧ್ರ ಪ್ರದೇಶದಲ್ಲಿ 14,429 ಪ್ರಕರಣಗಳು ದಾಖಲಾಗಿವೆ. ಶೇ. 64.08 ರಷ್ಟು ಹೊಸ ಪ್ರಕರಣಗಳು ಈ ಐದು ರಾಜ್ಯಗಳಲ್ಲಿ ಕಂಡುಬಂದಿದ್ದರೆ, ತಮಿಳುನಾಡಿನಲ್ಲೇ ಶೇ. 17.88 ಪ್ರಕರಣಗಳು ದಾಖಲಾಗಿವೆ. (ಏಜೆನ್ಸೀಸ್)

    ಚಿನ್ನ-ಬೆಳ್ಳಿ ವ್ಯಾಪಾರ : ಹಾಲ್​ಮಾರ್ಕ್​ ಇಲ್ಲದಿದ್ದರೆ ಬೀಳುತ್ತೆ ಕ್ರಿಮಿನಲ್​ ಕೇಸ್​!

    ರಾಷ್ಟ್ರಧ್ವಜಕ್ಕೆ ಅಪಮಾನ : ಕೇಜ್ರಿವಾಲ್ ಮೇಲೆ ಕೇಂದ್ರ ಸಚಿವ ಗರಂ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts