More

    ದೇಶದ ಮುಕ್ಕಾಲು ಭಾಗ ಕರೊನಾ ಕೇಸುಗಳು ಈ 10 ರಾಜ್ಯಗಳಲ್ಲಿವೆ !

    ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲಾಗಿರುವ ಹೊಸ ಕರೊನಾ ಪ್ರಕರಣಗಳಲ್ಲಿ ಶೇ.72.42 ರಷ್ಟು, ಅಂದರೆ ಸುಮಾರು ಮುಕ್ಕಾಲು ಭಾಗದಷ್ಟು ಪ್ರಕರಣಗಳು ಕೇವಲ ಹತ್ತು ರಾಜ್ಯಗಳಲ್ಲಿವೆ. ಮಹಾರಾಷ್ಟ್ರ ಎಂದಿನಂತೆ 46,781 ಹೊಸ ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಅದರ ಹಿಂದೆಯೇ ಕೇರಳ (43,529 ಪ್ರಕರಣಗಳು) ಮತ್ತು ಕರ್ನಾಟಕ (39,998 ಪ್ರಕರಣಗಳು) ರಾಜ್ಯಗಳಿವೆ.

    ಕರೊನಾ ಟಾಪ್​ ಟೆನ್ ಪಟ್ಟಿಯಲ್ಲಿರುವ ಇತರ ರಾಜ್ಯಗಳೆಂದರೆ ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ, ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ. ಒಟ್ಟಾಗಿ ಈ 10 ರಾಜ್ಯಗಳು ಕಳೆದ 24 ಗಂಟೆಗಳ ಅವಧಿಯಲ್ಲಿನ ದೇಶದ 3,62,727 ಹೊಸ ಕೋವಿಡ್ ಪ್ರಕರಣಗಳಲ್ಲಿ ಶೇ 72.42 ರಷ್ಟನ್ನು ದಾಖಲಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ.

    ಇದನ್ನೂ ಓದಿ: ‘ಲಸಿಕೆ ಹಾಕಿಸಿಕೊಳ್ಳಿ ಅಂತ ಸಂದೇಶ ಹಾಕ್ತೀರಿ… ಆದರೆ ಲಸಿಕೆ ಎಲ್ಲಿದೆ ?’ – ಹೈಕೋರ್ಟ್​ ಪ್ರಶ್ನೆ

    ಹಾಲಿ ಭಾರತದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 37,10,525ಕ್ಕೆ ಏರಿದೆ. ರಾಷ್ಟ್ರೀಯ ಮರಣ ದರವು ಶೇ. 1.09 ರಷ್ಟಿದ್ದು, ಕಳೆದ 24 ಗಂಟೆಗಳಲ್ಲಿ 4,120 ಸಾವುಗಳು ಸಂಭವಿಸಿವೆ. ಮೇಲಿನ ಹತ್ತು ರಾಜ್ಯಗಳು ಸಾವಿನ ಪ್ರಮಾಣದಲ್ಲೂ ಹಿರಿಯ ಪಾಲು ಪಡೆದಿದ್ದು, ಶೇ.74.30 ರಷ್ಟು ಸಾವುಗಳನ್ನು ವರದಿ ಮಾಡಿವೆ. ಮಹಾರಾಷ್ಟ್ರದಲ್ಲಿ 816 ಜನ ಕರೊನಾ ಸಂಬಂಧವಾಗಿ ಸಾವಪ್ಪಿದ್ದು, ಕರ್ನಾಟಕದಲ್ಲಿ 516 ಜನ ಸಾವಪ್ಪಿದ್ದಾರೆ.

    ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,52,181 ಜನ ಕರೊನಾದಿಂದ ಗುಣಮುಖರಾಗಿದ್ದು, ಈವರೆಗೆ ಒಟ್ಟು ಗುಣಮುಖರಾಗಿರುವವರ ಸಂಖ್ಯೆ 1,97,34,823 ಆಗಿದೆ. ಮೇಲಿನ ಹತ್ತು ರಾಜ್ಯಗಳಲ್ಲಿ ಹೊಸದಾಗಿ ಗುಣಮುಖರಾದವರ ಪ್ರಮಾಣ ಶೇ. 72.90ರಷ್ಟಿದೆ. (ಏಜೆನ್ಸೀಸ್)

    ಉನ್ನತ ಅಧಿಕಾರಿಗಳ ‘ರಿವ್ಯೂ’ಗಳಿಗೆ ಬೇಸತ್ತು ರಾಜೀನಾಮೆ ನೀಡಿದ ವೈದ್ಯರು

    ಲಸಿಕೆ ತಾಂತ್ರಿಕ ಸಮಿತಿ ಶಿಫಾರಸು : ಕೋವಿಶೀಲ್ಡ್​ ಡೋಸ್​ಗಳ ಅಂತರ ಹೆಚ್ಚಿಸಿ, ಸೋಂಕಿತರು 6 ತಿಂಗಳು ಕಾಯಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts