More

    ದೈವ ಮೆಚ್ಚಿದ ಕೊರಗಜ್ಜ ; ಫಸ್ಟ್​ ಲುಕ್​ ಬಿಡುಗಡೆಗೆ ಕಲ್ಲುರ್ಟಿ, ಗುಳಿಗ ದೈವಗಳ ಅನುಮತಿ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ದೈವ ಮೆಚ್ಚಿದ ಕೊರಗಜ್ಜ ; ಫಸ್ಟ್​ ಲುಕ್​ ಬಿಡುಗಡೆಗೆ ಕಲ್ಲುರ್ಟಿ, ಗುಳಿಗ ದೈವಗಳ ಅನುಮತಿ

    ಸುಧೀರ್​ ಅತ್ತಾವರ್​ ನಿರ್ದೇಶನದ ಕೊರಗಜ್ಜ ದೈವದ ಕುರಿತ ಸಿನಿಮಾ “ಕೊರಗಜ್ಜ’. ವಿಶೇಷ ಅಂದರೆ ಈ ಸಿನಿಮಾದ ಪ್ರತಿ ಹಂತದಲ್ಲೂ ದೈವಗಳ ಅನುಮತಿ ಪಡೆದೇ ಚಿತ್ರತಂಡ ಮುನ್ನಡೆಯುತ್ತಿದೆ. ಇದೀಗ “ಕೊರಗಜ್ಜ’ ಮೋಷನ್​ ಪೋಸ್ಟರ್​ ಮತ್ತು ಫಸ್ಟ್​ ಲುಕ್​ ಬಿಡುಗಡೆಗೆ ರೆಡಿಯಿದ್ದು, ಅದಕ್ಕೂ ದೈವಗಳ ಬಳಿ ಅನುಮತಿ ಪಡೆಯಲಾಗಿದೆ.

    ದೈವ ಮೆಚ್ಚಿದ ಕೊರಗಜ್ಜ ; ಫಸ್ಟ್​ ಲುಕ್​ ಬಿಡುಗಡೆಗೆ ಕಲ್ಲುರ್ಟಿ, ಗುಳಿಗ ದೈವಗಳ ಅನುಮತಿ

    “ಕೊರಗಜ್ಜ ದೈವದ ಕಳೆ- ಕಾರ್ಣಿಕ ಮತ್ತು ಪಾವಿತ್ರ್ಯತೆಗೆ ಯಾವುದೇ ಧಕ್ಕೆ ಬಾರದಂತೆ ಫಸ್ಟ್​ ಲುಕ್​ ವಿನ್ಯಾಸ ಮಾಡಿದ್ದೇವೆ. ಮೊದಲಿಗೆ ಕೊರಗಜ್ಜ, ಗುಳಿಗ ಮತ್ತು ಕಲ್ಲುರ್ಟಿ ದೈವಗಳಿಗೆ ವಿಶೇಷ ಕೋಲಸೇವೆ ನೀಡಿ, ದೈವಗಳ ಸಮಕ್ಷಮದಲ್ಲಿ ಮೋಷನ್​ ಪೋಸ್ಟರ್​ ಮತ್ತು ಸ್ಟ್​ ಲುಕ್​ ಪ್ರದರ್ಶಿಸಿ, ಸಾರ್ವಜನಿಕ ಪ್ರದರ್ಶನಕ್ಕೆ ಅನುಮತಿ ಬೇಡಿಕೊಂಡೆವು. ಅದಕ್ಕೆ ದೈವಗಳು ಒಪ್ಪಿಗೆ ನೀಡಿದ್ದಾರೆ. ಜತೆಗೆ ಎಲ್ಲೆಂದರಲ್ಲಿ ಈ ಸ್ಟ್​ ಲುಕ್​ ಮತ್ತು ಮೋಷನ್​ ಪೋಸ್ಟರ್​ಗಳನ್ನು ದೈವಕ್ಕೆ ಅಪಚಾರ ಆಗುವ ರೀತಿಯಲ್ಲಿ ಸಾರ್ವಜನಿಕರು ದುರುಪಯೋಗ ಮಾಡಬಾರದು ಎಂದು ಎಚ್ಚರಿಕೆ ನೀಡಿವೆ. ವಿಶೇಷವಾಗಿ ವಿನ್ಯಾಸ ಮಾಡಿರುವ ಪೋಸ್ಟರ್​ ಬಿಡುಗಡೆಗೆ ದೈವಗಳು ಒಪ್ಪಿಗೆ ನೀಡಿರದಿದ್ದರೆ, ನಾವು ರಿಲೀಸ್​ ಮಾಡುತ್ತಿರಲಿಲ್ಲ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಸುಧೀರ್​ ಅತ್ತಾವರ್​.

    ದೈವ ಮೆಚ್ಚಿದ ಕೊರಗಜ್ಜ ; ಫಸ್ಟ್​ ಲುಕ್​ ಬಿಡುಗಡೆಗೆ ಕಲ್ಲುರ್ಟಿ, ಗುಳಿಗ ದೈವಗಳ ಅನುಮತಿ

    ಕೋಲಸೇವೆಯಲ್ಲಿ ಮಾಜಿ ಸಚಿವೆ ಮೋಟಮ್ಮ, ನಟಿ ಭವ್ಯ ಮತ್ತು ಅವರ ಪುತ್ರಿ ಅದಿತಿ, ಸಂಕಲನಕಾರ ವಿದ್ಯಾಧರ್​ ಶೆಟ್ಟಿ, ಗಾಯಕ ರಮೇಶ್​ ಚಂದ್ರ, ನಾಯಕ ನಟ ಭರತ್​ ಸೂರ್ಯ, ಶ್ಲಾಘ್ಯ ಕಮಲಿನಿ ಮತ್ತು ಚಿತ್ರತಂಡದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಹಾಜರಿದ್ದರು.

    ದೈವ ಮೆಚ್ಚಿದ ಕೊರಗಜ್ಜ ; ಫಸ್ಟ್​ ಲುಕ್​ ಬಿಡುಗಡೆಗೆ ಕಲ್ಲುರ್ಟಿ, ಗುಳಿಗ ದೈವಗಳ ಅನುಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts