ಜಿಲ್ಲೆ

ವಾಣಿಜ್ಯ ಬೆಳೆ ಹಣ್ಣು ಬೆಳೆಯಲು ಪ್ರಾಥಮಿಕ ಜ್ಞಾನ ಅಗತ್ಯ

ಇಂದಿರಾ ಎನ್ ಕೆ

ಕುಂದಾಪುರ: ವಾತಾವರಣದ ಅನುಕೂಲ ಮತ್ತು ಪ್ರತಿಕೂಲ ಬದಲಾವಣೆಗಳನ್ನು ತಿಳಿದುಕೊಂಡು ವಿಶೇಷ ತಳಿಯ ಹಣ್ಣುಗಳನ್ನು ಬೆಳೆಸಬೇಕಾಗುತ್ತದೆ. ವಾಣಿಜ್ಯ ಬೆಳೆಯ ಹಣ್ಣುಗಳನ್ನು ಬೆಳೆಯಲು ತೋಟಗಾರಿಕೆಯ ಪ್ರಾಥಮಿಕ ಜ್ಞಾನ ಇರಲೇ ಬೇಕಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ದಿವ್ಯಾ ನಾಯಕ್ ತೆಕ್ಕಟ್ಟೆ ಹೇಳಿದರು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಸ್ರೂರಿನ ‘ವರದೇಂದ್ರ ಫಲೋದ್ಯಾನ’ಕ್ಕೆ ಭೇಟಿ ನೀಡಿದ ಕುಂದಾಪುರದ ಆರ್. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ನವೀನ ಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಸುಷ್ಮಾ ಶೆಣೈ, ವಾಣಿಜ್ಯಶಾಸ್ತ್ರ ಉಪನ್ಯಾಸಕಿ ದೀಪಾ ಶೆಟ್ಟಿ, ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥೆ ಜ್ಯೋತಿ, ಅರ್ಥಶಾಸ್ತ್ರ ಉಪನ್ಯಾಸಕಿ ನಾಗರತ್ನಾ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕ ರಾಮ್ ಶೆಟ್ಟಿ ಉಪಸ್ಥಿತರಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥ ಕೃಷ್ಣಮೂರ್ತಿ ಡಿ.ಬಿ. ಸ್ವಾಗತಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಸುಮತಿ ಶೆಣೈ ವಂದಿಸಿದರು.